ಎಂ.ಸಿ. ಯಹ್ಯಾ
Update: 2023-01-08 12:14 GMT
ಮಂಗಳೂರು: ಮೂಲತಃ ಕಾಸರಗೋಡು-ಮೊಗ್ರಾಲ್‌ನ ಪ್ರಸ್ತುತ ನಗರದ ಸ್ಟೇಟ್‌ಬ್ಯಾಂಕ್ ಸಮೀಪದ ಹ್ಯಾಮಿಲ್ಟನ್ ಸರ್ಕಲ್ ಬಳಿಯ ಕಾಂಪ್ಲೆಕ್ಸ್‌ನಲ್ಲಿ ವಾಸವಾಗಿದ್ದ ಎಂ.ಸಿ.ಯಹ್ಯಾ (77) ರವಿವಾರ ಬೆಳಗ್ಗೆ ನಗರದ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.
ಪತ್ನಿ, ಇಬ್ಬರು ಪುತ್ರಿಯರು, ಒಬ್ಬ ಪುತ್ರ ಹಾಗೂ ಅಪಾರ ಬಂಧುಬಳಗವನ್ನು ಮೃತರು ಅಗಲಿದ್ದಾರೆ.
ಬಿಲ್ಡರ್, ರಿಯಲ್ ಎಸ್ಟೇಟ್ ಉದ್ಯಮದಲ್ಲಿ ತೊಡಗಿಸಿಕೊಂಡಿದ್ದ ಇವರು ನಗರದ ಹ್ಯಾಮಿಲ್ಟನ್ ಕಾಂಪ್ಲೆಕ್ಸ್ ಮತ್ತು ಸೀವ್ಯೆವ್ ಟೂರಿಸ್ಟ್ ಹೋಮ್‌ನಲ್ಲಿ ಪಾಲುದಾರಿಕೆ ಹೊಂದಿದ್ದರು.
ಮಂಗಳೂರಿನ ಬಂದರ್ ಕೇಂದ್ರ ಜುಮಾ ಮಸ್ಜಿದ್‌ನ ದಫನ ಭೂಮಿಯಲ್ಲಿ ರವಿವಾರ ಸಂಜೆ ಅಂತ್ಯಸಂಸ್ಕಾರ ನಡೆಸಲಾಯಿತು.