ಉಡುಪಿ: ಜೆ.ಪಿ.ನಡ್ಡಾಗೆ ಸ್ವಾಗತ ಕೋರಿ ಹಾಕಲಾದ ಬ್ಯಾನರ್‌ಗಳಿಗೆ ಹಾನಿ; ದೂರು ದಾಖಲು
Update: 2023-02-19 13:10 GMT
ಉಡುಪಿ: ಜಿಲ್ಲೆಗೆ ಸೋಮವಾರ ಆಗಮಿಸುತ್ತಿರುವ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರಿಗೆ ಸ್ವಾಗತ ಕೋರಿ ಬನ್ನಂಜೆಯಲ್ಲಿ ಹಾಕಲಾಗಿರುವ ಬ್ಯಾನರ್‌ಗೆ ಕಿಡಿಗೇಡಿಗಳು ಹಾನಿಗೈದಿರುವ ಘಟನೆ ಇಂದು ಬೆಳಗಿನ ಜಾವ 6ಗಂಟೆಯ ಸುಮಾರಿಗೆ ನಡೆದಿದೆ.
ಜೆ.ಪಿ.ನಡ್ಡಾ ಅವರಿಗೆ ಸ್ವಾಗತ ಕೋರಿ ಬನ್ನಂಜೆ ರಸ್ತೆಯುದ್ದಕ್ಕೂ ಹಲವು ಬ್ಯಾನರ್‌ಗಳನ್ನು ಅಳವಡಿಸಲಾಗಿದ್ದು, ಅದರಲ್ಲಿ ಉಡುಪಿ ಶಾಸಕ ಕೆ.ರಘುಪತಿ ಭಟ್ ಸೇರಿದಂತೆ ಹಲವು ಮಂದಿ ಮುಖಂಡರು ಸ್ವಾಗತ ಕೋರಿರುವ ಐದಾರು ಬ್ಯಾನರ್‌ಗಳನ್ನು ಕಿಡಿಗೇಡಿಗಳು ಹರಿದು ಹಾನಿಗೊಳಿಸಿದ್ದಾರೆ.
ಈ ಬಗ್ಗೆ ಉಡುಪಿ ಜಿಲ್ಲಾ ಬಿಜೆಪಿಯಿಂದ ಉಡುಪಿ ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಅದರಂತೆ ಪೊಲೀಸರು ತನಿಖೆ ನಡೆಸಿದ್ದಾರೆ. ಈ ಸಂಬಂಧ ಸಿಟಿಟಿವಿ ಫುಟೇಜ್ ದೊರೆತಿದ್ದು, ಅದರಲ್ಲಿ ಇಂದು ಬೆಳಗಿನ ಜಾವ 45ವರ್ಷ ವಯಸ್ಸಿನ ವ್ಯಕ್ತಿಯೊಬ್ಬ ಬ್ಯಾನರ್ ಹರಿಯುತ್ತಿರುವುದು ಕಂಡುಬಂದಿದೆ. ಈ ಬಗ್ಗೆ ತನಿಖೆ ಮುಂದುವರೆದಿದೆ ಎಂದು ಉಡುಪಿ ನಗರ ಠಾಣಾ ಪೊಲೀಸ್ ನಿರೀಕ್ಷಕ ಮಂಜಪ್ಪ ಡಿ.ಆರ್. ತಿಳಿಸಿದ್ದಾರೆ.