ಮಣಿಪಾಲ: ಗಾಂಜಾ ಸೇವನೆ ಆರೋಪ; 10 ಮಂದಿ ವಶಕ್ಕೆ

Update: 2023-03-25 14:51 GMT

ಮಣಿಪಾಲ, ಮಾ.25: ಗಾಂಜಾ ಸೇವನೆಗೆ ಸಂಬಂಧಿಸಿ ಮಾ.18ರಂದು ಹೆರ್ಗಾ ಗ್ರಾಮದ ಸರಳಬೆಟ್ಟು ರಸ್ತೆಯ ಸಮೃದ್ದಿ ಅಪಾರ್ಟ್ ಮೆಂಟ್ ಬಳಿ ಮಣಿಪಾಲ ಪೊಲೀಸರು ಅಪೂರ್ವ ರಾಯ್(20), ಪುನೀತ್(19), ಅಖಿಲ್ ಮಿಶ್ರಾ(21), ಶಿಬಾಶೀಸ್ ದಾಸ್(20), ಯಶ್(21) ಹಾಗೂ ಮಣಿಪಾಲದ ಜಿಲ್ಲಾಧಿಕಾರಿ ಕಚೇರಿ ರಸ್ತೆಯ ಬಳಿ ಅನುಜ ಉಮೇಶ(18) ಎಂಬವರನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಅದೇ ರೀತಿ ಮಾ.18ರಂದು ಹೆರ್ಗ ಗ್ರಾಮದ ಸರಳಬೆಟ್ಟು, ಮಾವಿನಕಟ್ಟೆ ಬಳಿ ದೆಹಲಿ ಮೂಲದ ಸಾತ್ವಿಕ್ ಜೋಷಿ(19) ಹಾಗೂ  ಕೇರಳದ ಗೋವಿಂದ ಆರ್.ನಾಯರ್(22) ಎಂಬವರನ್ನು ಉಡುಪಿ ಸೆನ್ ಅಪರಾಧ ಪೊಲೀಸ್ ಠಾಣೆಯ ಪೊಲೀಸರು ವಶಕ್ಕೆ ಪಡೆದು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಪಡುಬಿದ್ರೆ: ಗಾಂಜಾ ಸೇವನೆಗೆ ಸಂಬಂಧಿಸಿ ಮಾ.23ರಂದು ಉಚ್ಚಿಲದಲ್ಲಿ ಕೆವಿನ್ ಕುಲ್ದೀಪ್ ಮಜಲು ಹಾಗೂ ಅಶ್ವಿನ್ ಪೂಜಾರಿ ಎಂಬವರನ್ನು ಪಡುಬಿದ್ರೆ ಪೊಲೀಸರು ವಶಕ್ಕೆ ಪಡೆದು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Similar News