ಚುನಾವಣೆ: ಮಣಿಪಾಲದಲ್ಲಿ ಪೊಲೀಸ್ ಪಥಸಂಚಲನ
Update: 2023-04-08 15:31 GMT
ಮಣಿಪಾಲ, ಎ.8: ಮುಂಬರುವ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಉಡುಪಿ ಪೊಲೀಸ್ ಉಪವಿಭಾಗ ವ್ಯಾಪ್ತಿಯ ಮಣಿಪಾಲದಲ್ಲಿ ಪೊಲೀಸ್ ಪಥ ಸಂಚಲನವು ಶನಿವಾರ ನಡೆಯಿತು.
ಪರ್ಕಳದಿಂದ ಆರಂಭಗೊಂಡ ಪಥಸಂಚಲನವು ಮಣಿಪಾಲದ ಪ್ರಮುಖ ರಸ್ತೆಯಲ್ಲಿ ಸುಮಾರು ನಾಲ್ಕು ಕಿ.ಮೀ. ಸಾಗಿ ಮಣಿಪಾಲ ಪೊಲೀಸ್ ಠಾಣೆ ಯಲ್ಲಿ ಸಮಾಪ್ತಿಗೊಂಡಿತು. ಇದರಲ್ಲಿ ಪ್ಯಾರಾ ಮಿಲಿಟರಿ ಪಡೆಯ 60 ಮಂದಿ ಮಹಿಳಾ ಸಿಬ್ಬಂದಿ, ಉಡುಪಿ ಪೊಲೀಸ್ ಉಪವಿಭಾಗದ 75 ಪೊಲೀಸ್ ಸಿಬ್ಬಂದಿ ಸೇರಿದಂತೆ ಒಟ್ಟು 150 ಮಂದಿ ಪೊಲೀಸರು ಪಾಲ್ಗೊಂಡಿದ್ದರು.
ಈ ಸಂದರ್ಭದಲ್ಲಿ ಉಡುಪಿ ಜಿಲ್ಲಾ ಹೆಚ್ಚುವರಿ ಪೊಲೀಸ್ ನಿರೀಕ್ಷಕ ಎಸ್.ಟಿ. ಸಿದ್ದಲಿಂಗಪ್ಪ, ಅರೆ ಸೈನ್ಯ ಪಡೆಯ ಸಹಾಯಕ ಕಮಾಂಡರ್ ಅಂಜನಾ, ಉಡುಪಿ ಡಿವೈಎಸ್ಪಿ ದಿನಕರ ಕೆ.ಪಿ., ಮಣಿಪಾಲ ಪೊಲೀಸ್ ನಿರೀಕ್ಷಕ ದೇವರಾಜ ಟಿ.ವಿ. ಮೊದಲಾದವರು ಹಾಜರಿದ್ದರು.