ಕಾರ್ಕಳ: ಮನೆಗೆ ನುಗ್ಗಿ ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣ ಕಳವು
Update: 2023-04-13 15:04 GMT
ಕಾರ್ಕಳ, ಎ.13: ನಿಟ್ಟೆ ಗ್ರಾಮದ ಬೈದಾಲ್ ರಸ್ತೆಯಲ್ಲಿರುವ ಅನಿಲ್ ಕಂಪೌಂಡ್‌ನಲ್ಲಿರುವ ಜನವಾಸವಿಲ್ಲದ ಮನೆಯೊಳಗೆ ಎ.10ರ ಸಂಜೆಯಿಂದ ಎ.12ರ ಬೆಳಗಿನ ಮಧ್ಯಾವಧಿಯಲ್ಲಿ ನುಗ್ಗಿದ ಕಳ್ಳರು ಲಕ್ಷಾಂತರ ರೂ. ಮೌಲ್ಯದ ಸೊತ್ತುಗಳನ್ನು ಕಳವು ಮಾಡಿರುವ ಬಗ್ಗೆ ವರದಿಯಾಗಿದೆ.
ಲೂಸಿ ಕ್ಯಾಸ್ತಲಿನೊ ಎಂಬವರಿಗೆ ಸೇರಿದ ಮನೆಯ ಬಾಗಿಲನ್ನು ಮುರಿದು ಒಳನುಗ್ಗಿದ ಕಳ್ಳರು ಕೊಠಡಿಯ ಕಪಾಟಿನಲ್ಲಿಟ್ಟಿದ್ದ 2 ಜೊತೆ ಕಿವಿಯ ಬೆಂಡೊಲೆ, 2 ಬಲೆಗಳು, 3 ಉಂಗುರುಗಳು, 1 ಹವಳದ ಸರ, 1 ಚಿನ್ನದ ಸರ ಮತ್ತು 2 ಬೇಬಿ ಬ್ಯಾಂಗಲ್ಸ್, ಹಳೆಯ ಚಿನ್ನಾಭರಣಗಳನ್ನು ಕಳವು ಮಾಡಿಕೊಂಡು ಹೋಗಿದ್ದಾರೆ. ಇವುಗಳ ಒಟ್ಟು ಮೌಲ್ಯ 1.45 ಲಕ್ಷ ರೂ. ಎಂದು ಅಂದಾಜಿಸಲಾಗಿದೆ. ಈ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.