ಮಂಗಳೂರು ಕ್ರೈಸ್ತ ಧರ್ಮಪ್ರಾಂತ್ಯದ ಪ್ರತಿನಿಧಿಗಳಿಂದ ಸ್ಪೀಕರ್ ಯು.ಟಿ.ಖಾದರ್ ಭೇಟಿ
Update: 2023-05-26 17:24 GMT
ಮಂಗಳೂರು: ಮಂಗಳೂರು ವಿಧಾನ ಸಭಾ ಕ್ಷೇತ್ರದಲ್ಲಿ 5ನೇ ಬಾರಿ ಶಾಸಕರಾಗಿ, ಕರ್ನಾಟಕ ವಿಧಾನಸಭೆಯ ನೂತನ ಸಭಾಧ್ಯಕ್ಷರಾಗಿ ಚುನಾಯಿತರಾದ ಯು.ಟಿ.ಖಾದರ್ ಇವರಿಗೆ ಮಂಗಳೂರು ಧರ್ಮ ಪ್ರಾಂತ್ಯದ ಧರ್ಮಾಧ್ಯಕ್ಷರ ಹಾಗೂ ಸಮಸ್ತ ಕ್ರೈಸ್ತ ಬಾಂಧವರ ಪರವಾಗಿ ಧರ್ಮಪ್ರಾಂತ್ಯದ ಸಾರ್ವಜನಿಕ ಸಂಪರ್ಕ ಅಧಿಕಾರಿ ರೊಯ್ ಕ್ಯಾಸ್ತೆಲಿನೊ ಹಾಗೂ ಕಥೊಲಿಕ್ ಸಭಾ ಮಂಗಳೂರು ಪ್ರದೇಶ (ರಿ.) ಅಧ್ಯಕ್ಷ ಸ್ಟ್ಯಾನಿ ಲೋಬೊ ಇವರು ಹೂಗುಚ್ಛ ನೀಡಿ ಅಭಿನಂದಿಸಿದರು.
ಕಳೆದ ಅವಧಿಯಲ್ಲಿ ವಿಧಾನ ಸಭೆಯಲ್ಲಿ ಕ್ರೈಸ್ತರಿಗೆ ಸಂಬಂಧಪಟ್ಟ ವಿಷಯಗಳನ್ನು ಉಲ್ಲೇಖಿಸಿ, ಕ್ರೈಸ್ತರಿಗೆ ಪರಿಹಾರ ದೊರಕಿಸುವ ನಿಟ್ಟಿನಲ್ಲಿ ತಾವು ಶ್ರಮ ವಹಿಸಿದ್ದೀರಿ. ಅದಕ್ಕಾಗಿ ಧರ್ಮಪ್ರಾಂತ್ಯದ ಪರವಾಗಿ ಅಭಿನಂದನೆಗಳನ್ನು ಸಲ್ಲಿಸುತ್ತೇವೆ. ತಮ್ಮ ನೂತನ ಜವಾಬ್ದಾರಿಯಲ್ಲಿ ತಮಗೆ ಯಶಸ್ಸು ದೊರೆಯಲಿ ಎಂದು ರೊಯ್ ಕ್ಯಾಸ್ತೆಲಿನೊ ಶುಭ ಹಾರೈಸಿದರು.