ಉಡುಪಿ: ಯಕ್ಷಗಾನ ಕಲಾವಿದರ ಸಮಾವೇಶ ಉದ್ಘಾಟನೆ

Update: 2023-06-01 14:40 GMT

ಉಡುಪಿ, ಜೂ.1: ಉಡುಪಿಯ ಯಕ್ಷಗಾನ ಕಲಾರಂಗ ಕಳೆದ 23 ವರ್ಷಗಳಿಂದ ನಡೆಸಿಕೊಂಡು ಬರುತ್ತಿರುವ ಯಕ್ಷನಿಧಿ ಕಲಾವಿದರ  ಸಮಾವೇಶವು ಉಡುಪಿಯ ಪೂರ್ಣಪ್ರಜ್ಞ ಸಭಾಂಗಣದಲ್ಲಿ ಇಂದು ನಡೆಯಿತು. 

ಸಮಾವೇಶವನ್ನು ಖ್ಯಾತ ಕಥಕ್ ನೃತ್ಯ ಕಲಾವಿದೆ ವಿದುಷಿ ಮಧು ನಟರಾಜ್ ಜ್ಯೋತಿ ಬೆಳಗಿಸುವ ಮೂಲಕ ಉದ್ಘಾಟಿಸಿದರು. ಬಳಿಕ ನಡೆದ ಕೊರಿಯೋಗ್ರಫಿ ಕುರಿತ ಉಪನ್ಯಾಸ ಹಾಗೂ ಪ್ರಾತ್ಯಕ್ಷಿಕೆಯಲ್ಲಿ ಮಾತನಾಡಿದ ಅವರು ನೃತ್ಯವು ಸ್ಥಳ, ಕಾಲಕ್ಕೆ ಸಂಬಂಧಿಸಿದ ಕಲೆ. ನೃತ್ಯ ಇವೆರಡರ ಸಂಯೋಜನೆಯಾಗಿದೆ ಎಂದರು.

ಉದ್ಘಾಟನೆ ವೇಳೆ ಅದಮಾರು ಎಜುಕೇಶನ್ ಸೊಸೈಟಿ ಆಡಳಿತಾಧಿಕಾರಿ ಡಾ.ಎ.ಪಿ.ಭಟ್, ಕಲಾವಿದರಾದ ಆರ್ಗೋಡು ಮೋಹನದಾಸ್ ಶೆಣೈ, ಕೊಂಡದಕುಳಿ ರಾಮಚಂದ್ರ ಹೆಗಡೆ, ಸರಪಾಡಿ ಅಶೋಕ್ ಶೆಟ್ಟಿ, ಪ್ರೊ. ಕೆ. ಸದಾಶಿವ ರಾವ್ ಉಪಸ್ಥಿತರಿದ್ದರು. ವಿದ್ಯಾ ಪ್ರಸಾದ್ ಕಾರ್ಯಕ್ರಮ ನಿರೂಪಿಸಿದರು.  

ಉದ್ಘಾಟನೆಗೆ ಮುನ್ನ ಬೆಳಗ್ಗೆ 8:30ರಿಂದ ಡಾ. ಶೈಲಜಾ, ಡಾ. ರಾಜೇಶ್ ನಾವುಡ ಹಾಗೂ ಡಾ. ಸುನೀಲ್ ಮುಂಡ್ಕೂರ್ ತಂಡದಿಂದ ಜಿಲ್ಲೆಯ ಯಕ್ಷಗಾನ ಕಲಾವಿದರ ಆರೋಗ್ಯ ತಪಾಸಣೆ ನಡೆಯಿತು.

Similar News