ಸುನಿಲ್ ಕುಮಾರ್ ಬಸ್‌ರೂಟ್ ರಾಷ್ಟ್ರೀಕರಣಕ್ಕಾಗಿ ಹೋರಾಟ ಮಾಡಲಿ: ಸುಂದರ ಮಾಸ್ತರ್

Update: 2023-06-03 11:49 GMT

ಉಡುಪಿ, ಜೂ.3: ಸುನಿಲ್ ಕುಮಾರ್‌ಗೆ ನಿಜವಾಗಿಯೂ ಮಹಿಳೆಯರ ಬಗ್ಗೆ ಕಾಳಜಿ, ಅನುಕಂಪ ಇದ್ದರೆ, ಖಾಸಗಿ ಬಸ್‌ಗಳಲ್ಲೂ ಉಚಿತ ಪ್ರಯಾಣಕ್ಕಾಗಿ ಒತ್ತಾಯ ಮಾಡುವ ಬದಲು ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಯ ಎಲ್ಲಾ ಬಸ್ ರೂಟ್‌ಗಳನ್ನು ರಾಷ್ಟ್ರೀಕರಣಕ್ಕಾಗಿ ಹೋರಾಟ ಮಾಡಲಿ. ಅವರೊಂದಿಗೆ ನಾವೂ ಕೂಡ ಹೋಗುತ್ತೇವೆ ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ ಅಂಬೇಡ್ಕರ್ ವಾದ ಉಡುಪಿ ಜಿಲ್ಲಾ ಪ್ರಧಾನ ಸಂಚಾಲಕ ಸುಂದರ ಮಾಸ್ತರ್ ಆಗ್ರಹಿಸಿದ್ದಾರೆ.

ಕೇವಲ ನಾಟಕೀಯ ಕೂಗಾಟ ಬಿಟ್ಟು ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಎಲ್ಲಾ ರೂಟ್‌ಗಳನ್ನೂ ರಾಷ್ಟ್ರೀಕರಣ ಗೊಳಿಸಿದರೆ ಶಾಲಾ ವಿದ್ಯಾರ್ಥಿಗಳು ಸಹಿತ ಎಲ್ಲಾ ನಾಗರೀಕರಿಗೂ ತುಂಬಾ ಅನುಕೂಲವಾಗುತ್ತದೆ. ಈ ಕೆಲಸ ಮೊದಲು ಮಾಡೀ ಆಗ ತನ್ನಿಂದ ತಾನಾಗಿಯೇ ಎಲ್ಲಾ ಮಹಿಳೆಯರಿಗೂ ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಉಚಿತ ಪ್ರಯಾಣ ಸಿಗುತ್ತದೆ ಎಂದರು.

ನೀವು ಮಂತ್ರಿಯಾಗಿದ್ದಾಗ ತಮ್ಮದೇ ಸರಕಾರದಲ್ಲಿ ಈ ಬಗ್ಗೆ ಚಕಾರವೆತ್ತದೇ ಈಗ ಇದ್ದಕ್ಕಿದ್ದಂತೆ ಬೊಬ್ಬೆ ಹೊಡೆಯುವುದು ನೋಡಿದರೇ ಮಹಿಳೆಯರಿಗೆ ಉಚಿತ ಪ್ರಯಾಣ ಘೋಷಣೆ ತಮಗೆ ನುಂಗಲಾರದ ತುತ್ತಾದಂತೆ ಕಾಣುತ್ತದೆ ಎಂದು ಸುಂದರ ಮಾಸ್ತರ್ ಪ್ರಕಟಣೆಯಲ್ಲಿ ಟೀಕಿಸಿದ್ದಾರೆ.

Similar News