ವಿಧಾನಸೌಧಕ್ಕೆ ಬವೇರಿಯಾ ಸಂಸತ್ತಿನ ಸದಸ್ಯರ ನಿಯೋಗ ಭೇಟಿ

Update: 2025-02-13 22:40 IST
ವಿಧಾನಸೌಧಕ್ಕೆ ಬವೇರಿಯಾ ಸಂಸತ್ತಿನ ಸದಸ್ಯರ ನಿಯೋಗ ಭೇಟಿ
  • whatsapp icon

ಬೆಂಗಳೂರು : ಜರ್ಮನಿ ದೇಶದ ಬವೇರಿಯಾ ಸಂಸತ್ತಿನ ‘Internal Security and Municipal Affairs and Sport’ ಸಮಿತಿಯ ಉಪಾಧ್ಯಕ್ಷ Florian Siekmann ನೇತೃತ್ವದ 23 ಸದಸ್ಯರುಗಳನ್ನೊಳಗೊಂಡ ನಿಯೋಗವು ವಿಧಾನಸೌಧಕ್ಕೆ ಭೇಟಿ ನೀಡಿ ಸ್ಪೀಕರ್ ಯು.ಟಿ.ಖಾದರ್ ಹಾಗೂ ವಿಧಾನಮಂಡಲದ ಸ್ಥಾಯಿ ಸಮಿತಿಗಳ ಅಧ್ಯಕ್ಷರುಗಳೊಂದಿಗೆ ಸಭೆ ನಡೆಸಿದರು.

ಬವೇರಿಯಾ ಸಂಸತ್ತಿನ ಮತ್ತು ಕರ್ನಾಟಕ ವಿಧಾನಸಭೆಯ ಸದನದ ಕಾರ್ಯವೈಖರಿ, ನಡಾವಳಿಗಳು, ನಿಯಮಾವಳಿಗಳ ಕುರಿತು ಸಭೆಯಲ್ಲಿ ಪರಸ್ಪರ ಚರ್ಚಿಸಿದ ಮುಖಂಡರುಗಳು, ಮುಂದೆ ಕರ್ನಾಟಕ ಮತ್ತು ಬವೇರಿಯಾ ಸಂಸತ್ತಿನ ನಡುವೆ ಅತ್ಯುತ್ತಮ ನಡವಳಿಗಳ ಕುರಿತು ಪರಸ್ಪರ ವಿನಿಮಯ ಮಾಡಿಕೊಳ್ಳಬಹುದು ಎಂದು ಸ್ಪೀಕರ್ ಖಾದರ್ ತಿಳಿಸಿದರು.

ಸಭೆಯಲ್ಲಿ, ವಿಧಾನ ಮಂಡಲದ ಸ್ಥಾಯಿ ಸಮಿತಿ ಅಧ್ಯಕ್ಷರುಗಳು, ಅಧಿಕಾರಿಗಳು ಸೇರಿದಂತೆ ಇತರೆ ಗಣ್ಯರು ಉಪಸ್ಥಿತರಿದ್ದರು.


Tags:    

Writer - ವಾರ್ತಾಭಾರತಿ

contributor

Editor - Ashik

contributor

Byline - ವಾರ್ತಾಭಾರತಿ

contributor

Similar News