ವೈವಿಧ್ಯತೆಯ ದೇಶದಲ್ಲಿ ʼಎಲ್ಲರಿಗೂ ಒಂದೇ ಅಳತೆʼ ಎಂಬ ಮಾದರಿ ಅಪಾಯಕಾರಿ : ಎಐಸಿಸಿ ವಿಸ್ತ್ರತ ಕಾರ್ಯಕಾರಿಣಿ ಸಭೆಯಲ್ಲಿ ಸಿದ್ದರಾಮಯ್ಯ ಅಭಿಮತ

Update: 2025-04-09 00:36 IST
ವೈವಿಧ್ಯತೆಯ ದೇಶದಲ್ಲಿ ʼಎಲ್ಲರಿಗೂ ಒಂದೇ ಅಳತೆʼ ಎಂಬ ಮಾದರಿ ಅಪಾಯಕಾರಿ : ಎಐಸಿಸಿ ವಿಸ್ತ್ರತ ಕಾರ್ಯಕಾರಿಣಿ ಸಭೆಯಲ್ಲಿ ಸಿದ್ದರಾಮಯ್ಯ ಅಭಿಮತ
  • whatsapp icon

ಅಹಮದಾಬಾದ್: ಯುಜಿಸಿಯಿಂದ ತರಲಾಗಿರುವ ಸುಧಾರಣೆಗಳು, ಶಿಕ್ಷಣದ ಮೇಲಿನ ಕೇಂದ್ರೀಕೃತ ನಿಯಂತ್ರಣ ಸ್ಥಾಪಿಸುವ ಹಾಗೂ ಜ್ಞಾನ, ಅವಶ್ಯಕತೆ ಹಾಗೂ ಪ್ರತ್ಯೇಕ ರಾಜ್ಯಗಳ ಆಶಯಗಳನ್ನು ಕಡೆಗಣಿಸುವಂತಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ

ಮಂಗಳವಾರ ಗುಜರಾತ್‌ನ ಅಹಮದಾಬಾದ್‌ ಸಬರಮತಿಯಲ್ಲಿ ಜರುಗಿದ ಎಐಸಿಸಿ ವಿಕೃತ ಕಾರ್ಯಕಾರಿಣಿ ಸಭೆಯಲ್ಲಿ ಮಾತನಾಡಿದ ಅವರು, ರಾಷ್ಟ್ರೀಯ ಶಿಕ್ಷಣ ನೀತಿಯು ಕಾಗದದ ಮೇಲೆ ಎಷ್ಟೇ ಮಹತ್ವಾಕಾಂಕ್ಷಿಯಾಗಿ ತೋರಿದರೂ, ವೈವಿಧ್ಯತೆಯಿಂದ ಕೂಡಿದ ದೇಶದಲ್ಲಿ ʼಎಲ್ಲರಿಗೂ ಒಂದೇ ಆಳತೆʼ ಎಂಬ ಮಾದರಿ ಅಪಾಯಕಾರಿಯಾಗಿದೆ ಎಂದು ಸಿದ್ದರಾಮಯ್ಯ ಹೇಳಿದರು.

ಹಿಂದುತ್ವದ ಪ್ರಚಾರ ಮತ್ತು ದ್ವೇಷ ಪ್ರಸರಣದ ಕುರಿತು: ಶಿಕ್ಷಣ, ಅಭಿವೃದ್ಧಿ ಮತ್ತು ಯುವ ಜನಾಂಗವನ್ನು ಅವಕಾಶಗಳ ಜಗತ್ತಿಗೆ ಸಂಪರ್ಕಿಸಲು ತಂತ್ರಜ್ಞಾನವನ್ನು ಬಳಸುವ ಕಾಲಘಟ್ಟದಲ್ಲಿ ನಾವಿದ್ದೇವೆ. ಆದರೆ ಬಿಜೆಪಿಯ ಅಧಿಕಾರಾವಧಿಯಲ್ಲಿ ಮನಸ್ಸುಗಳನ್ನು ಒಡೆಯಲು, ಸತ್ಯವನ್ನು ತಿರುಚಲು ಹಾಗೂ ಸೌಹಾರ್ದತೆಯನ್ನು ಹಾಳು ಮಾಡಲು ತಂತ್ರಜ್ಞಾನವನ್ನು ಅಸ್ತ್ರವನ್ನಾಗಿಸಿಕೊಳ್ಳಲಾಗಿದೆ ಎಂದು ಮುಖ್ಯಮಂತ್ರಿ ತಿಳಿಸಿದರು.

ಒಂದು ಸಮುದಾಯವನ್ನು ಮತ್ತೊಂದರ ವಿರುದ್ಧ ಎತ್ತಿ ಕಟ್ಟಲಾಗುತ್ತಿದೆ. ಇತ್ತೀಚಿನ ವಕ್ಫ್‌ ಮಂಡಳಿ ವಿವಾದ ಇದಕ್ಕೊಂದು ಉದಾಹರಣೆ, ಬಿಜೆಪಿ ನಾಯಕರು ಮುಸ್ಲಿಮರನ್ನು ಗುರಿಯಾಗಿಸಲು, ಕಾಲ್ಪನಿಕ ಶತ್ರುಗಳನ್ನು ಸೃಷ್ಟಿಸಲು ಹಾಗೂ ನೆರೆಹೊರೆಗಳನ್ನು ರಣರಂಗವಾಗಿ ಪರಿವರ್ತಿಸಲು ಸುಳ್ಳು ಕಥೆಗಳನ್ನು ಪ್ರಚುರಪಡಿಸುತ್ತಿದ್ದಾರೆ ಎಂದು ಅವರು ಕಿಡಿಕಾರಿದರು.

ಹಿಂದೂ ಧರ್ಮವು ಸಹಿಷ್ಣುತೆ, ಶಾಂತಿ, ಶೋಧನೆ ಮತ್ತು ಒಳಗೊಳ್ಳುವಿಕೆಯಲ್ಲಿ ನಂಬಿಕೆಯಿರಿಸಿದೆ. ಆದರೆ ನಾವು ಹಿಂದುತ್ವ ಎಂಬ ದ್ವೇಷವನ್ನೇ ಬೋಧಿಸುವ, ಇತರನ್ನು ಹೊರತುಪಡಿಸುವ ಮತ್ತು ಧರ್ಮವನ್ನು ಅಧಿಕಾರಕ್ಕಾಗಿ ಬಳಸುವ ಸಾಧನವಾಗಿರುವ ರಾಜಕೀಯ ಸಿದ್ಧಾಂತವನ್ನು ತಿರಸ್ಕರಿಸುತ್ತೇವೆ.

-ಸಿದ್ದರಾಮಯ್ಯ, ಮುಖ್ಯಮಂತ್ರಿ 

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News