ಆನೇಕಲ್: ಗ್ಯಾಸ್ ಸಿಲಿಂಡರ್ ಸ್ಫೋಟ: ಇಬ್ಬರಿಗೆ ಗಂಭೀರ ಗಾಯ; ಮನೆಯ ಗೋಡೆ ಛಿದ್ರ
Update: 2025-01-06 06:18 GMT
ಆನೇಕಲ್: ಮನೆಯೊಂದರಲ್ಲಿ ಅಡುಗೆ ಅನಿಲ ಸಿಲಿಂಡರ್ ಸ್ಫೋಟಗೊಂಡು ಇಬ್ಬರು ಗಂಭೀರವಾಗಿ ಗಾಯಗೊಂಡ ಘಟನೆ ಬೆಂಗಳೂರು ನಗರ ಜಿಲ್ಲೆ ಆನೇಕಲ್ ತಾಲೂಕಿನ ಕಿತ್ತಾಗನಹಳ್ಳಿ ಗ್ರಾಮದಲ್ಲಿ ಸೋಮವಾರ ಬೆಳಗ್ಗೆ ಸಂಭವಿಸಿದೆ.
ಕೇರಳ ಮೂಲದ ಸುನೀಲ್ ಜೋಸೆಫ್ ಹಾಗು ತಮಿಳುನಾಡು ಮೂಲದ ವಿಷ್ಣು ಜಯರಾಮ್ ಎಂಬವರು ಗಾಯಗೊಂಡಿದ್ದು, ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಸ್ಫೋಟದ ತೀವ್ರತೆಗೆ ಮೊದಲನೇ ಮಹಡಿಯಲ್ಲಿರುವ ಮನೆಯ ಗೋಡೆ, ಕಿಟಕಿ, ಬಾಗಿಲು ಛಿದ್ರಗೊಂಡಿದೆ.
ಅಕ್ಕಪಕ್ಕದ ನಾಲ್ಕೈದು ಮನೆಗಳು, ಕೆಲವು ವಾಹನಗಳಿಗೂ ಹಾನಿಯಾಗಿವೆ. ಸೂರ್ಯಸಿಟಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ.