ಬೆಂಗಳೂರು | ಶಾರ್ಟ್ ಸಕ್ರ್ಯೂಟ್‍ನಿಂದ ವಾಣಿಜ್ಯ ಕಟ್ಟಡದಲ್ಲಿ ಅಗ್ನಿ ಅವಘಡ

Update: 2024-04-05 13:31 GMT

ಬೆಂಗಳೂರು: ಇಲ್ಲಿನ ಆರ್.ಟಿ.ನಗರದ 80 ಅಡಿ ರಸ್ತೆಯಲ್ಲಿನ ವಾಣಿಜ್ಯ ಕಟ್ಟಡವೊಂದರ ಮೊದಲ ಮಹಡಿಯಲ್ಲಿರುವ ಮಿರಾಕಲ್ ಡ್ರಿಂಕ್ಸ್ ಹೆಸರಿನ ಆಯುರ್ವೇದಿಕ್ ಉತ್ಪನ್ನಗಳ ಕಂಪೆನಿ ಮತ್ತು ನೆಲಮಹಡಿಯಲ್ಲಿರುವ ಐಟಿ ಕಂಪೆನಿಯಲ್ಲಿ ವಿದ್ಯುತ್ ಶಾರ್ಟ್ ಸಕ್ರ್ಯೂಟ್‍ನಿಂದ ಅಗ್ನಿ ಅವಘಡ ಸಂಭವಿಸಿರುವ ಘಟನೆ ಶುಕ್ರವಾರ ವರದಿಯಾಗಿದೆ.

ಘಟನೆ ಸಂದರ್ಭದಲ್ಲಿ 11ಕ್ಕೂ ಹೆಚ್ಚು ಸಿಬ್ಬಂದಿ ಕೆಲಸ ಮಾಡುತ್ತಿದ್ದರು ಎನ್ನಲಾಗಿದ್ದು, ಎಲ್ಲರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಕಟ್ಟಡದ ನೆಲಮಹಡಿಯಲ್ಲಿ ಬೆಂಕಿ ಹೊತ್ತಿಕೊಂಡು ನಂತರ ಮೇಲಿನ ಮಹಡಿಗೆ ವ್ಯಾಪಿಸಿದೆ. ಕಟ್ಟಡವಿಡೀ ಹೊಗೆ ತುಂಬಿಕೊಂಡು ಒಳಗೆ ಸಿಕ್ಕಿಹಾಕಿಕೊಂಡಿದ್ದವರು ಉಸಿರಾಟ ಸಮಸ್ಯೆ ಕಾಣಿಸಿತು.

ಅಗ್ನಿ ಸುರಕ್ಷತಾ ವ್ಯವಸ್ಥೆಯಿದ್ದರಿಂದ ಐಟಿ ಕಂಪೆನಿಯ ಸಿಬ್ಬಂದಿಗೆ ಅಗ್ನಿ ಸುರಕ್ಷತೆ ಬಗ್ಗೆ ಮೊದಲೇ ತರಬೇತಿ ನೀಡಿದ್ದರಿಂದ ಇಂದಿನ ಅವಘಡ ವೇಳೆ ಸಮಯಪ್ರಜ್ಞೆ ಮೆರೆದು ಪ್ರಾಣಾಪಾಯ ಅನಾಹುತ ತಪ್ಪಿಹೋಯಿತು. ಹಲವು ಸಿಬ್ಬಂದಿ ಕಟ್ಟಡದ ಮೇಲ್ಛಾವಣಿಗೆ ದೌಡಾಯಿಸಿದರು ಎಂದು ಪೊಲೀಸರು ತಿಳಿಸಿದ್ದಾರೆ.

ಘಟನೆ ಬಗ್ಗೆ ಮಾಹಿತಿ ತಿಳಿದ ಕೂಡಲೇ ಸ್ಥಳಕ್ಕೆ ಐದಕ್ಕೂ ಹೆಚ್ಚು ಅಗ್ನಿಶಾಮಕ ವಾಹನಗಳೊಂದಿಗೆ ಸಿಬ್ಬಂದಿ ಹಾಗೂ ಆರ್.ಟಿ.ನಗರ ಠಾಣೆಯ ಪೊಲೀಸರು ದೌಡಾಯಿಸಿದ್ದು, ಪಕ್ಕದ ಕಟ್ಟಡಕ್ಕೆ ಏಣಿ ಇಟ್ಟು ಕಟ್ಟಡದಲ್ಲಿದ್ದವರ ರಕ್ಷಣಾ ಕಾರ್ಯಚರಣೆ ನಡೆಸಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News