9ನೇ ವಾರ್ಷಿಕ HSE ಎಕ್ಸಲೆನ್ಸ್ & ESG ಗ್ಲೋಬಲ್ ಅವಾರ್ಡ್ಸ್ : ಬ್ಯಾರೀಸ್ ಗ್ರೂಪ್ ಗೆ ಗೋಲ್ಡ್ ವಿದ್ ಫೈವ್ ಸ್ಟಾರ್ ಅವಾರ್ಡ್

Update: 2025-03-03 21:42 IST
9ನೇ ವಾರ್ಷಿಕ HSE ಎಕ್ಸಲೆನ್ಸ್ & ESG ಗ್ಲೋಬಲ್ ಅವಾರ್ಡ್ಸ್ : ಬ್ಯಾರೀಸ್ ಗ್ರೂಪ್ ಗೆ ಗೋಲ್ಡ್ ವಿದ್ ಫೈವ್ ಸ್ಟಾರ್ ಅವಾರ್ಡ್
  • whatsapp icon

ಬೆಂಗಳೂರು: ಮುಂಬೈಯ ಐಐಎಂ ಪೊವೈಯಲ್ಲಿ ನಡೆದ 9ನೇ ವಾರ್ಷಿಕ ಎಚ್ಎಸ್ಇ ಎಕ್ಸಲೆನ್ಸ್ & ಇಎಸ್ ಜಿ ಗ್ಲೋಬಲ್ ಅವಾರ್ಡ್ಸ್ 2024( HSE Excellence & ESG Global Awards 2024 )ರ ನಿರ್ಮಾಣ ಕ್ಷೇತ್ರದ ಬೃಹತ್ ವಿಭಾಗದಲ್ಲಿ ಬ್ಯಾರೀಸ್ ಗ್ರೂಪ್ ಪ್ರತಿಷ್ಠಿತ ʼಗೋಲ್ಡ್ ವಿದ್ ಫೈವ್ ಸ್ಟಾರ್ ಅವಾರ್ಡ್ʼ ʼGold with 5-Star Awardʼಗೆ ಪಾತ್ರವಾಗಿದೆ.

ನಿರ್ಮಾಣ ಕ್ಷೇತ್ರದಲ್ಲಿ ಬ್ಯಾರೀಸ್ ಗ್ರೂಪ್ ತೆಗೆದುಕೊಳ್ಳುವ ಸುರಕ್ಷತೆ, ಆರೋಗ್ಯ ಖಾತರಿ, ಪರಿಸರ ಸ್ನೇಹಿ ನಿರ್ಮಾಣ ಕಾರ್ಯವೈಖರಿಯನ್ನು ಗುರುತಿಸಿ ಈ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಮೂರು ವಿಭಾಗಗಳಲ್ಲಿ ವಿವಿಧ ಹಂತಗಳ ಪರಿಶೀಲನೆ ಬಳಿಕ ಈ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಎಲ್ಲ ಹಂತಗಳಲ್ಲೂ ಬ್ಯಾರೀಸ್ ಗ್ರೂಪ್ ಶ್ರೇಷ್ಠ ನಿರ್ವಹಣೆಯನ್ನು ಪರಿಗಣಿಸಿ ಪ್ರಶಸ್ತಿ ನೀಡಲಾಗಿದೆ.


ಇದರ ಜೊತೆ ಬ್ಯಾರೀಸ್ ಗ್ರೂಪ್ ನ ಇಬ್ಬರಿಗೆ ನಿರ್ಮಾಣ ಕ್ಷೇತ್ರದಲ್ಲಿ ವೈಯಕ್ತಿಕ ಶ್ರೇಷ್ಠ ಸಾಧನೆಗಾಗಿ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಬ್ಯಾರೀಸ್ ಗ್ರೂಪ್‌ನ ಜನರಲ್ ಮ್ಯಾನೇಜರ್ ಬಾಲಸುಬ್ರಹ್ಮಣ್ಯನ್ ಹಾಗು ಜನರಲ್ ಮ್ಯಾನೇಜರ್ ತಿಲಕ್ ಸಿಂಗ್ ಅವರು ಕ್ರಮವಾಗಿ ಮೆಂಟರ್ ಆಫ್ ದಿ ಇಯರ್ 2024 ಹಾಗು ಲೀಡರ್ ಶಿಪ್ ಆಫ್ ದಿ ಇಯರ್ 2024 ಪ್ರಶಸ್ತಿಗಳಿಗೆ ಪಾತ್ರರಾದರು.


ನಿರ್ಮಾಣ ಕ್ಷೇತ್ರದಲ್ಲಿ ಅರೋಗ್ಯ, ಸುರಕ್ಷತೆ ಹಾಗು ಪರಿಸರ ಸ್ನೇಹಿ ನೀತಿಯನ್ನು ಅತ್ಯುನ್ನತ ಮಟ್ಟದಲ್ಲಿ ಪಾಲಿಸುವ ಬ್ಯಾರೀಸ್ ಗ್ರೂಪ್ ನ ಬದ್ಧತೆಯನ್ನು ಆಧರಿಸಿ ಈ ಪ್ರತಿಷ್ಠಿತ ಪ್ರಶಸ್ತಿ ನೀಡಲಾಗಿದೆ. ನಿರ್ಮಾಣದಲ್ಲಿ ಭಾಗವಹಿಸುವ ಎಲ್ಲರಿಗೂ ಸುರಕ್ಷಿತ ಹಾಗು ಆರೋಗ್ಯವಂತ ವಾತಾವರಣ ಒದಗಿಸುವ ಹಾಗು ಪರಿಸರ ಸ್ನೇಹಿ ನಿರ್ಮಾಣದ ಮೂಲಕ ಎಲ್ಲರಿಗೂ ಸುಸ್ಥಿರ ಅಭಿವೃದ್ಧಿಯ ಭವಿಷ್ಯ ರೂಪಿಸುವ ಬ್ಯಾರೀಸ್ ಗ್ರೂಪ್ ನ ನಿಷ್ಠೆಗೆ ಸಂದ ಗೌರವ ಇದು ಎಂದು ಬ್ಯಾರೀಸ್ ಗ್ರೂಪ್ ಪ್ರಕಟಣೆಯಲ್ಲಿ ತಿಳಿಸಿದೆ.





Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News