ಬೆಂಗಳೂರು : ಮಾದಕ ವಸ್ತು ಸರಬರಾಜಿನಲ್ಲಿ ತೊಡಗಿದ್ದ 7 ಮಂದಿ ಸೆರೆ
Update: 2024-01-30 14:00 GMT
ಬೆಂಗಳೂರು: ಮಾದಕ ವಸ್ತುಗಳ ಸರಬರಾಜಿನಲ್ಲಿ ತೊಡಗಿದ್ದ ವಿದೇಶಿ ಮೂಲದವರು ಸಹಿತ 7 ಮಂದಿ ಆರೋಪಿಗಳನ್ನು ಸಿಸಿಬಿಯ ಮಾದಕ ವಸ್ತು ನಿಗ್ರಹ ದಳದ ಪೊಲೀಸರು ಬಂಧಿಸಿರುವುದಾಗಿ ವರದಿಯಾಗಿದೆ.
ನಗರದ ಜ್ಞಾನಭಾರತಿ, ಬಾಣಸವಾಡಿ, ಹುಳಿಮಾವು, ಪುಲಿಕೇಶಿನಗರ ವ್ಯಾಪ್ತಿಗಳಲ್ಲಿ ಕಾರ್ಯಾಚರಣೆ ನಡೆಸಲಾಗಿದ್ದು, ಶೇಕ್ ಮೊಹಮ್ಮದ್ ಅರ್ಬಾಜ್, ಗೌತಮ್, ಕೆ. ಅಭಿಷೇಕ್, ಎನ್.ಜಾಧವ್, ರಿತಿಕ್ ರಾಜ್ ಸಹಿತ 7 ಮಂದಿ ಆರೋಪಿಗಳನ್ನು ಬಂಧಿಸಲಾಗಿದೆ.
ಬಂಧಿತ ಆರೋಪಿಗಳಿಂದ 219 ಎಕ್ಟ್ಸಸಿ ಪಿಲ್ಸ್, 505 ಗ್ರಾಂ ಎಂಡಿಎಂಎ ಕ್ರಿಸ್ಟಲ್ಸ್, 130 ಗ್ರಾಂ ಚರಸ್, 100.88 ಗ್ರಾಂ ಕೊಕೇನ್ ಸಹಿತ 1.52 ಕೋಟಿ ಮೌಲ್ಯದ ಮಾದಕ ಪದಾರ್ಥಗಳು, 1 ದ್ವಿಚಕ್ರ ವಾಹನ, 6 ಮೊಬೈಲ್ ಫೋನ್‍ಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಬಿ.ದಯಾನಂದ್ ಮಾಹಿತಿ ನೀಡಿದ್ದಾರೆ.