ಬೆಂಗಳೂರು: ರೌಡಿ ಶೀಟರ್, ಮೀಟರ್ ಬಡ್ಡಿ ದಂಧೆ ಆರೋಪಿಗಳ ಮನೆಗಳ ಮೇಲೆ ಸಿಸಿಬಿ ದಾಳಿ

Update: 2023-12-22 04:56 GMT

ಬೆಂಗಳೂರು, ಡಿ.22 ಸಿಸಿಬಿ ಪೊಲೀಸರು ಗುರುವಾರ ಸಂಎಜ ಭರ್ಜರಿ ಕಾರ್ಯಾಚರಣೆ ನಡೆಸಿದ್ದು, ರೌಡಿ ಶೀಟರ್ ಗಳು, ಮೀಟರ್ ಬಡ್ಡಿ ನಡೆಸುತ್ತಿದ್ದವರ ಮನೆಗಳ ಮೇಲೆ ದಾಳಿ ಮಾಡಿದ್ದಾರೆ.

ಅನ್ನಪೂರ್ಣೇಶ್ವರಿ ನಗರ ರೌಡಿ ಶೀಟರ್ ಅನಿಲ್ ಕುಮಾರ್, ಯಶವಂತಪುರ ರೌಡಿಶೀಟರ್ ಗಿರೀಶ್ ಅಲಿಯಾಸ್ ರಾಬರಿ ಗಿರಿ, ವಿವೇಕ ನಗರ ರೌಡಿಶೀಟರ್ಗಳಾದ ನಾರಾಯಣ, ಹೇಮಂತ್, ರಾಮು, ಸೋಲದೇವನಹಳ್ಳಿ ರೌಡಿಶೀಟರ್ ತಿಮ್ಮ ಸೇರಿದಂತೆ ಅನೇಕರ ಮನೆಗಳ ಮೇಲೆ ಸಿಸಿಬಿ ಅಧಿಕಾರಿಗಳು ದಾಳಿ ನಡೆಸಿ ಶೋಧ ನಡೆಸಿದ್ದಾರೆ.

ಬೋರ್ ವೆಲ್ ಅನಿಲ್ ಮನೆಯಲ್ಲಿ ತಕಾರಾರು ಆಸ್ತಿಪತ್ರ, ಹಲವು ಚೆಕ್ಗಳು ಪತ್ತೆಯಾಗಿವೆ. ಅನಿಲ್ ಮೇಲೆ ಅಮಾಯಕರಿಗೆ ಬೆದರಿಸಿ ನಿವೇಶನ ಕಬಳಿಸಿರುವ ದೂರು ಕೇಳಿಬಂದಿತ್ತು. ಅಷ್ಟೇ ಅಲ್ಲದೆ ಮೀಟರ್ ಬಡ್ಡಿ ವ್ಯವಹಾರ ನಡೆಸುತ್ತಿರುವ ಶಂಕೆ ಕೂಡ ವ್ಯಕ್ತವಾಗಿತ್ತು. ಈ ಹಿನ್ನೆಲೆಯಲ್ಲಿ ಆತನ ಮನೆ ಮೇಲೆ ಸಿಸಿಬಿ ತಂಡ ದಾಳಿ ಮಾಡಿದೆ. ಅನಿಲ್ ಮನೆಯಲ್ಲಿ ಸಿಕ್ಕ ದಾಖಲೆ ಪರಿಶೀಲನೆ ಮಾಡಲಾಗುತ್ತಿದೆ ಎಂದು ಸಿಸಿಬಿ ಪೊಲೀಸರು ತಿಳಿಸಿದ್ದಾರೆ.

ಉದ್ಯಮಿ ಕೃಷ್ಣೇಗೌಡ ಕಚೇರಿ ಮೇಲೂ ಸಿಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Haneef

contributor

Byline - ವಾರ್ತಾಭಾರತಿ

contributor

Similar News