ಬೆಂಗಳೂರು ನಗರದಲ್ಲಿ ಭಕ್ತಿಯಿಂದ ಕ್ರಿಸ್‍ಮಸ್ ಹಬ್ಬ ಆಚರಣೆ

Update: 2023-12-25 17:40 GMT

ಬೆಂಗಳೂರು: ನಗರದಲ್ಲಿ ಯೇಸುಕ್ರಿಸ್ತರ ಜನ್ಮದಿನವಾದ ಕ್ರಿಸ್‍ಮಸ್ ಹಬ್ಬವನ್ನು ಭಕ್ತಿಯಿಂದ ಆಚರಿಸಲಾಯಿತು. ರವಿವಾರ ರಾತ್ರಿಯಿಂದಲೇ ನಗರದ ಎಲ್ಲ ಚರ್ಚ್‍ಗಳಲ್ಲಿ, ಕ್ರೈಸ್ತ ಸಮುದಾಯದ ಮನೆಗಳಲ್ಲಿ ಸಂಭ್ರಮ ಮನೆ ಮಾಡಿತ್ತು. ಮನೆಗಳ ಮೇಲೆ ನಕ್ಷತ್ರಗಳು ವಿದ್ಯುತ್ ದೀಪಗಳು ಕಂಗೊಳಿಸಿದವು.

ಪ್ರಮುಖವಾಗಿ ಫ್ರೆಜರ್ ಟೌನ್‍ನ ಸೇಂಟ್ ಫ್ರಾನ್ಸಿಸ್ ಕ್ಷೇವಿಯರ್ ಕೆಥೆಡ್ರಲ್ ಚರ್ಚ್ ನಲ್ಲಿ ಯೇಸುವಿನ ಜನದ ಬಗ್ಗೆ ಗೀತ ಗಾಯನ ಮತ್ತು ಅದರ ಕುರಿತ ಹೊಂಬೆಗಳ ಪ್ರದರ್ಶನ ಹಮ್ಮಿಕ್ಕೊಳ್ಳಗಿತ್ತು. ಅದರಂತೆ ಲಕ್ಷಾಂತರ ಮಂದಿ ಚರ್ಚ್‍ಗೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿದರು. ಯೇಸುವಿನ ಜೀವನ ಬಿಂಬಿಸುವ ಪ್ರದರ್ಶನ ಜನರನ್ನು ಆಕರ್ಷಿಸಿತು. ಯೇಸುವಿನ ಪ್ರತಿಮೆ ಮುಂದೆ ಭಕ್ತರು ಮೊಂಬತ್ತಿ ಹಿಡಿದು ನಮನ ಸಲ್ಲಿಸಿದರು.

ಶಿವಾಜಿನಗರದ ಸೆಂಟ್ ಮೇರಿಸ್ ಬೆಸಿಲಿಕಾ ಚರ್ಚ್‍ನಲ್ಲಿ, ಬ್ರಿಗೇಡ್ ರಸ್ತೆ ಬಳಿಯ ಸೇಂಟ್ ಪ್ಯಾಟ್ರಿಕ್ಸ್ ಚರ್ಚ್,ಸೇಂಟ್ ಮಾಕ್ರ್ಸ್ ಕೆಥೆಡ್ರಲ್, ಚಾಮರಾಜಪೇಟೆಯ ಸೇಂಟ್ ಜೋಸೆಫ್ ಚರ್ಚ್, ಸೇಂಟ್ ಜಾನ್ಸ್ ಚರ್ಚ್ ಸೇರಿದಂತೆ ಅನೇಕ ಚರ್ಚ್‍ಗಳಲ್ಲೂ ಕ್ರಿಸ್‍ಮಸ್ ಹಬ್ಬವನ್ನು ಆಚಾರಿಸಲಾಯಿತು. ಎಲ್ಲ ಚರ್ಚ್‍ಗಳಲ್ಲಿ ಬೃಹದಾಕಾರದ ನಕ್ಷತ್ರಗಳು, ಕ್ರಿಸ್‍ಮಸ್ ವೃಕ್ಷಗಳು, ಬಣ್ಣ ಬಣ್ಣದ ಬಲೂನುಗಳು, ಘಂಟೆಗಳು ಹಾಗೂ ಸಾಂತಾ ಕ್ಲಾಸ್ ಪ್ರತಿರೂಪಗಳು ಜನರ ಗಮನ ಸೆಳೆದವು.

ನಗರದ ಎಲ್ಲ ಚರ್ಚ್‍ಗಳಲ್ಲಿ ವಿಶೇಷ ಪ್ರಾರ್ಥನೆ, ಕ್ರಿಸ್‍ಮಸ್ ಕರೋಲ್ ಗಾಯನ, ಸಾಂಸ್ಕøತಿಕ ಕಾರ್ಯಕ್ರಮಗಳು ನಡೆದವು. ರಂಗು ರಂಗಿನ ದೀಪಗಳಿಂದ ಮಾಡಿದ ಕ್ರಿಸ್‍ಮಸ್ ವೃಕ್ಷಗಳು ಮಾರುಕಟ್ಟೆಗಳಲ್ಲಿ ಗ್ರಾಹಕರನ್ನು ಆಕರ್ಷಿಸುತ್ತಿದ್ದವು. ಬೇಕರಿಗಳಲ್ಲಿ ವಿಶೇಷ ಕೇಕ್‍ಗಳ ಪ್ರದರ್ಶನ ಹಾಗೂ ಮಾರಾಟ ಭರ್ಜರಿಯಾಗಿ ನಡೆಯಿತು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News