ಪರ್ಯಾಯ ದಿನಾಂಕದಲ್ಲಿ ಸಿಎ ಪರೀಕ್ಷೆ ನಡೆಸಲು ಒತ್ತಾಯ
ಬೆಂಗಳೂರು : ಬಿ.ಕಾಂ ಪರೀಕ್ಷೆ ಹಾಗೂ ಸಿಎ ಪರೀಕ್ಷೆಗಳು ಒಂದೇ ದಿನ ನಡೆಯುತ್ತಿದ್ದು, ವಿದ್ಯಾರ್ಥಿನಿಯರಿಗೆ ಪರ್ಯಾಯ ದಿನಾಂಕದಲ್ಲಿ ಸಿಎ ಪರೀಕ್ಷೆ ತೆಗೆದುಕೊಳ್ಳಲು ಅನುಮತಿ ಕೊಡುವಂತೆ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಜೊತೆ ಮಾತನಾಡಿ, ನ್ಯಾಯ ದೊರಕಿಸಿಕೊಡಬೇಕು ಎಂದು ಮಾಜಿ ಸಚಿವ ಎಸ್.ಸುರೇಶ್ ಕುಮಾರ್ ಉನ್ನತ ಶಿಕ್ಷಣ ಸಚಿವರನ್ನು ಆಗ್ರಹಿಸಿದ್ದಾರೆ.
ಬುಧವಾರ ಪ್ರಕಟನೆ ಹೊರಡಿಸಿರುವ ಅವರು, ಹಲವು ವಿದ್ಯಾರ್ಥಿಗಳು ಇಂದು(ಜ.15) ಒಂದೇ ಸಮಯದಲ್ಲಿ ಬಿ.ಕಾಂ ಹಾಗೂ ಸಿಎ ಪರೀಕ್ಷೆ ಬರೆವಂತೆ ವೇಳಾಪಟ್ಟಿ ಪ್ರಕಟವಾಗಿದೆ. ಹೀಗಾಗಿ ಏಕ ಕಾಲದಲ್ಲಿ ನಡೆಯಲಿರುವ ಈ ಎರಡು ಪರೀಕ್ಷೆಗಳಲ್ಲಿ ಯಾವ ಪರೀಕ್ಷೆಯನ್ನು ವಿದ್ಯಾರ್ಥಿಗಳು ತೆಗೆದುಕೊಳ್ಳಬೇಕು ಎಂದು ಕೇಳಿದ್ದಾರೆ.
ಯಾವುದೇ ವಿಶ್ವವಿದ್ಯಾನಿಲಯ ಈ ಕೇವಲ 24 ಗಂಟೆ ಮುಂಚೆ ಮೊದಲೇ ನಿಗದಿಯಾಗಿರುವ ಪರೀಕ್ಷೆಯನ್ನು ಹಿಂದೆ ಮುಂದೆ ನೋಡದೆ ಮುಂದೂಡುವುದು ವಿಶ್ವವಿದ್ಯಾನಿಲಯದ ವಿಶ್ವಾಸಾರ್ಹತೆಯ ದೃಷ್ಟಿಯಿಂದ ಒಳ್ಳೆಯದಲ್ಲ. ಹೀಗಾಗಿ ಸಿಎ ಪರೀಕ್ಷೆಯನ್ನು ಪರ್ಯಾಯ ದಿನದಂದು ನಡೆಸಬೇಕು ಎಂದು ಅವರು ಹೇಳಿದ್ದಾರೆ.