ಕಳಪೆ ತೊಗರಿ ಬಿತ್ತನೆ ಬೀಜ ವಿತರಣೆ : ಬಿಜೆಪಿ ಆರೋಪ

Update: 2024-12-08 16:28 GMT

ಸಾಂದರ್ಭಿಕ ಚಿತ್ರ

ಬೆಂಗಳೂರು : ರಾಜ್ಯದ ಭ್ರಷ್ಟ ಕಾಂಗ್ರೆಸ್ ಸರಕಾರ ವಿತರಣೆ ಮಾಡಿರುವ ತೊಗರಿ ಬಿತ್ತನೆ ಬೀಜದಲ್ಲಿ ಭಾರೀ ಗೋಲ್ಮಾಲ್ ನಡೆಸಿ ಅನ್ನದಾತರನ್ನು ಕಣ್ಣೀರಿನಲ್ಲಿ ಕೈತೊಳೆಯುವಂತೆ ಮಾಡಿದೆ. ಕಳಪೆ ಗುಣಮಟ್ಟದ ಬಿತ್ತನೆ ಬೀಜ ಪೂರೈಸಿದ ಕಾರಣ ಆಳೆತ್ತರದ ಗಿಡ ಬೆಳೆದರೂ ಕಾಯಿಗಳೇ ಬಿಡದೆ ರೈತರನ್ನು ಕಂಗಾಲಾಗಿಸಿದೆ ಎಂದು ರಾಜ್ಯ ಬಿಜೆಪಿ ಆರೋಪಿಸಿದೆ.

ಈ ಕುರಿತು ಎಕ್ಸ್ ನಲ್ಲಿ ಪೋಸ್ಟ್ ಹಾಕಿದ ಬಿಜೆಪಿ, ಕಳಪೆ ಗುಣಮಟ್ಟದ ಬಿತ್ತನೆ ಬೀಜ ಪೂರೈಸಿದ ಕಾರಣ ಆಳೆತ್ತರದ ಗಿಡ ಬೆಳೆದರೂ ಕಾಯಿಗಳೇ ಬಿಡದೆ ರೈತರನ್ನು ಕಂಗಾಲಾಗಿಸಿದೆ. ವಿಜಯಪುರದಲ್ಲಿ ಒಟ್ಟು 469 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ತೊಗರಿ ಬಿತ್ತನೆ ಮಾಡಲಾಗಿದ್ದು, ಉತ್ತಮ ಮಳೆ ಆಗಿದ್ದರಿಂದ ತೊಗರಿ ಗಿಡಗಳು ಚೆನ್ನಾಗಿ ಎತ್ತರಕ್ಕೆ ಬೆಳೆದಿದ್ದು ಉತ್ತಮ ಇಳುವರಿ ಬರುತ್ತದೆ ಎಂದು ರೈತರು ಖುಷಿಯಾಗಿದ್ದರು.

ಆದರೆ, ಇದೀಗ ಕಟಾವಿಗೆ ಬರುವ ಸಮಯವಾದರೂ ಗಿಡದಲ್ಲಿ ಇನ್ನೂ ತೊಗರಿ ಕಾಯಿಯೇ ಬಿಟ್ಟಿಲ್ಲ. ಸರಕಾರ, ಅಧಿಕಾರಿಗಳು ಬೀಜದ ಕಂಪನಿಗಳೊಂದಿಗೆ ಶಾಮೀಲಾಗಿ ಕರುನಾಡಿನ ರೈತರಿಗೆ ಮೋಸವೆಸಗಿದ್ದಾರೆ ಎಂದು ತಿಳಿಸಿದೆ. 

Full View

Tags:    

Writer - ವಾರ್ತಾಭಾರತಿ

contributor

Editor - Ashik

contributor

Byline - ವಾರ್ತಾಭಾರತಿ

contributor

Similar News