ಮದ್ಯ ಕುಡಿದು ಶಾಲಾ ವಾಹನ ಚಾಲನೆ : 72 ಚಾಲಕರ ವಿರುದ್ಧ ಎಫ್‍ಐಆರ್ ದಾಖಲು
Update: 2024-08-05 12:44 GMT
ಬೆಂಗಳೂರು : ಮದ್ಯ ಕುಡಿದು ಶಾಲಾ ವಾಹನ ಚಲಾಯಿಸುತ್ತಿದ್ದವರ ವಿರುದ್ಧ ನಗರ ಸಂಚಾರ ಪೊಲೀಸರು ವಿಶೇಷ ಕಾರ್ಯಾಚರಣೆ ಕೈಗೊಂಡು ಒಟ್ಟು 12,165 ವಾಹನಗಳ ಚಾಲಕರನ್ನು ತಪಾಸಣೆಗೊಳಪಡಿಸಿದ್ದು, ಈ ಪೈಕಿ 72 ಚಾಲಕರ ವಿರುದ್ಧ ಎಫ್‍ಐಆರ್ ದಾಖಲಿಸಿದ್ದಾರೆ.
ಮದ್ಯ ಕುಡಿದು ಶಾಲಾ ವಾಹನ ಚಲಾಯಿಸುತ್ತಿರುವ ಕೆಲ ಚಾಲಕರಿಂದ ಅಪಘಾತ, ಎಲ್ಲೆಂದರಲ್ಲಿ ಶಾಲಾ ವಾಹನಗಳ ನಿಲುಗಡೆ ಮುಂತಾದ ಆರೋಪಗಳ ಸಂಬಂಧ ದೂರುಗಳು ಬಂದಿದ್ದವು. ಆದ್ದರಿಂದ ವಿಶೇಷ ಕಾರ್ಯಾಚರಣೆ ನಡೆಸಿ ಕಾನೂನು ಉಲ್ಲಂಘಿಸಿರುವ ಚಾಲಕ ವಿರುದ್ಧ ಕ್ರಮ ಜರುಗಿಸಲಾಗಿದೆ ಎಂದು ಸಂಚಾರ ಪೊಲೀಸರು ತಿಳಿಸಿದ್ದಾರೆ.
ಜನವರಿ ತಿಂಗಳಿನಲ್ಲಿ 16, ಫೆಬ್ರವರಿಯಲ್ಲಿ 07, ಜುಲೈನಲ್ಲಿ 23 ಹಾಗೂ ಆಗಸ್ಟ್‌ನಲ್ಲಿ ಇದುವರೆಗೂ 26 ಪ್ರಕರಣಗಳನ್ನು ದಾಖಲಿಸಿ ಚಾಲಕ ವಿರುದ್ಧ ಕಾನೂ ಕ್ರಮ ಜರುಗಿಸಿರುವುದಾಗಿ ಸಂಚಾರಿ ಪೊಲೀಸರು ಮಾಹಿತಿ ನೀಡಿದ್ದಾರೆ.