ಬಿಬಿಎಂಪಿ ಮತ್ತು ಕೆಲವು ಇತರ ಕಾನೂನು ವಿಧೇಯಕ ಮಂಡನೆ

Update: 2023-12-11 16:13 GMT

ಬೆಳಗಾವಿ: ಕರ್ನಾಟಕ ಸ್ಟಾಂಪುಗಳ ಅಧಿನಿಯಮ, 1957ರ ಮೇರೆಗೆ ಮಾರ್ಗಸೂಚಿ ಮೌಲ್ಯಕ್ಕೆ ಸಂಬಂಧಿಸಿದಂತೆ ಉಪಕರದ ಪ್ರಮಾಣ, ಪರಿಶೀಲನಾ ಶುಲ್ಕ ಇತ್ಯಾದಿಗಳನ್ನು ನಿರ್ದಿಷ್ಟಪಡಿಸಲು ಅವಕಾಶ ಕಲ್ಪಿಸುವ ‘ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಮತ್ತು ಕೆಲವು ಇತರ ಕಾನೂನು(ತಿದ್ದುಪಡಿ) ವಿಧೇಯಕ-2023’ ಮಂಡಿಸಲಾಯಿತು.

ಸೋಮವಾರ ವಿಧಾನಸಭೆಯಲ್ಲಿ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ವಿಧೇಯಕವನ್ನು ಮಂಡಿಸಿದರು. ಹಿಂದೆ ಉಪಕರ, ಪರಿಶೀಲನಾ ಶುಲ್ಕ ಇತ್ಯಾದಿಗಳನ್ನು ಸಂಗ್ರಹಿಸಿದ್ದನ್ನು ಸಿಂಧುಗೊಳಿಸಲು ಉಪಬಂಧ ಕಲ್ಪಿಸುವುದಕ್ಕಾಗಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಅಧಿನಿಯಮ-2020 ಮತ್ತು ಕರ್ನಾಟಕ ನಗರ ಪಾಲಿಕೆಗಳ ಅಧಿನಿಯಮ-1976 ಅನ್ನು ತಿದ್ದುಪಡಿ ಮಾಡಲು ಈ ವಿಧೇಯಕವನ್ನು ತರಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News