ಸಾಂಸ್ಕೃತಿಕ ಟ್ರಸ್ಟ್‌ಗಳಿಗೆ ಅಧ್ಯಕ್ಷ, ಸದಸ್ಯರ ನೇಮಿಸಿ ಸರಕಾರ ಆದೇಶ

Update: 2024-12-14 15:08 GMT

ಬೆಂಗಳೂರು :  ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಡಿಯಲ್ಲಿನ ಪ್ರತಿಷ್ಠಾನ ಮತ್ತು ಟ್ರಸ್ಟ್‌ಗಳಿಗೆ ಅಧ್ಯಕ್ಷರು ಮತ್ತು ಸದಸ್ಯರನ್ನು ನೇಮಿಸಿ ಸರಕಾರ ಆದೇಶ ಹೊರಡಿಸಿದೆ.

ರಾಷ್ಟ್ರಕವಿ ಕುವೆಂಪು ಪ್ರತಿಷ್ಠಾನ ಶಿವಮೊಗ್ಗಕ್ಕೆ ಡಾ.ಬಿ.ಎಲ್.ಶಂಕರ್, ಪಿ.ಬಿ.ಧುತ್ತರಗಿ ಟ್ರಸ್ಟ್‌ಗೆ ಸಂಗಪ್ಪ ಕಲ್ಲಪ್ಪ ಕೊನೆಸಾಗರ, ಉಡುಪಿಯ ಶಿವರಾಮ ಕಾರಂತ ಟ್ರಸ್ಟ್‌ಗೆ ಗಣನಾಥ ಎಕ್ಕಾರು ಅವರನ್ನು ಅಧ್ಯಕ್ಷರನ್ನಾಗಿ ನೇಮಿಸಲಾಗಿದೆ.

 ಕವಿಚಕ್ರವರ್ತಿ ರನ್ನ ಪ್ರತಿಷ್ಠಾನಕ್ಕೆ ಬಾಗಲಕೋಟೆಯ ಜಿಲ್ಲಾಧಿಕಾರಿ, ಪು.ತಿ.ನ ಟ್ರಸ್ಟ್‌ಗೆ ಪ್ರೊ.ಎಂ.ಕೃಷ್ಣೇಗೌಡ, ಹಲಸಂಗಿ ಗೆಳೆಯರ ಟ್ರಸ್ಟ್ ಗೆ ವಿಜಯಪುರ ಜಿಲ್ಲಾಧಿಕಾರಿ, ಬೆಳಗಾವಿಯ ಡಾ.ಬಸವರಾಜ ಕಟ್ಟಿಮನಿ ಪ್ರತಿಷ್ಠಾನಕ್ಕೆ ಡಾ.ಯಲ್ಲಪ್ಪ ಹಿಮ್ಮಡಿ, ಬೆಟಗೆರೆ ಕೃಷ್ಣಶರ್ಮ ಟ್ರಸ್ಟ್‌ಗೆ ಡಾ.ವಿನಯ್ ನಾಯಕ ಅವರನ್ನು ಅಧ್ಯಕ್ಷರನ್ನಾಗಿ ಸರಕಾರ ನೇಮಿಸಿದೆ.

ಕನ್ನಡ ಸಂಸ್ಕೃತಿ ಇಲಾಖೆಯಡಿ ಒಟ್ಟು 24 ಪ್ರತಿಷ್ಠಾನ ಮತ್ತು ಟ್ರಸ್ಟ್‌ಗಳು ಕಾರ್ಯನಿರ್ವಹಿಸುತ್ತಿದ್ದು, ಇದರಲ್ಲಿ ಕೆಲವು ಟ್ರಸ್ಟ್‌ ಗಳ ಅಧ್ಯಕ್ಷ ಮತ್ತು ಸದಸ್ಯರ ಕಾರ್ಯಕಾರಿ ಸಮಿತಿ ಅವಧಿ ಹಿಂದೆಯೇ ಮುಗಿದಿತ್ತು, ಅದರಂತೆ ಎಲ್ಲ ಟ್ರಸ್ಟ್ ಮತ್ತು ಪ್ರತಿಷ್ಠಾನಗಳಿಗೆ ಅಧ್ಯಕ್ಷರು ಮತ್ತು ಸದಸ್ಯರನ್ನು ನೇಮಿಸಲಾಗಿದೆ ಎಂದು ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News