ಜೆಡಿಎಸ್‍ಗೆ ಒಂದು ಮತ ನೀಡಿದರೆ ಬಿಜೆಪಿಗೆ ಎರಡು ಮತ ನೀಡಿದಂತೆ : ಸಚಿವ ಝಮೀರ್ ಅಹ್ಮದ್ ಖಾನ್

Update: 2024-04-13 16:57 GMT

ಬೆಂಗಳೂರು : ಲೋಕಸಭೆ ಚುನಾವಣೆಯಲ್ಲಿ ಮುಸ್ಲಿಮ್ ಸಮುದಾಯ ಜೆಡಿಎಸ್ ಗೆ ಒಂದು ಮತ ಹಾಕಿದರೆ ಬಿಜೆಪಿಗೆ ಎರಡು ಮತ ಹಾಕಿದಂತೆ ಎಂದು ವಸತಿ ಹಾಗೂ ಅಲ್ಪಸಂಖ್ಯಾತರ ಕಲ್ಯಾಣ ಸಚಿವ ಝಮೀರ್ ಅಹ್ಮದ್ ಖಾನ್ ಹೇಳಿದರು.

ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಚನ್ನಪಟ್ಟಣದ ಮೆಹದಿ ನಗರ, ಟಿಪ್ಪು ನಗರ, ಸಾತನೂರು ಸರ್ಕಲ್, ಮದೀನಾ ಚೌಕ್, ಶೇರ್ ಹೋಟೆಲ್ ವೃತ್ತದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಡಿ.ಕೆ.ಸುರೇಶ್ ಪರ ರೋಡ್ ಶೋ ನಡೆಸಿ ಮತಯಾಚನೆ ಮಾಡಿದ ಅವರು, ದೇಶ ಮತ್ತು ಸಂವಿಧಾನ ಅಪಾಯದಲ್ಲಿದ್ದು ಕೋಮುವಾದಿ ಬಿಜೆಪಿ ಸೋಲಿಸಲು ಎಲ್ಲ ಜಾತಿಯ ಬಡವರು ಒಂದಾಗಬೇಕು ಎಂದು ಕರೆ ನೀಡಿದರು.

ಕಾಂಗ್ರೆಸ್ ರಾಜ್ಯದಲ್ಲಿ ಅಧಿಕಾರಕ್ಕೆ ಬಂದ ನಂತರ ಐದು ಗ್ಯಾರಂಟಿ ಅನುಷ್ಠಾನ ಮಾಡಿದ್ದೇವೆ. ಕೋಟ್ಯಂತರ ಕುಟುಂಬಗಳ ಆರ್ಥಿಕ ಸ್ಥಿತಿ ಸುಧಾರಣೆ ಆಗಿದೆ. ಹೀಗಾಗಿ ಕಾಂಗ್ರೆಸ್ ಗೆ ಮಾತ್ರ ಅಭಿವೃದ್ಧಿ ಹಾಗೂ ಜನಪರ ಬದ್ಧತೆ ಇದೆ. ಸಂಸದ ಡಿ.ಕೆ.ಸುರೇಶ್ ದೇಶದಲ್ಲೆ ಮಾದರಿ ಸಂಸದ. ಸದಾ ಜನರ ಜತೆ ಇರುವ ನಾಯಕ. ಸಂಸದರಾಗಿ ಅವರು ಮಾಡಿರುವ ಕೆಲಸ ಯಾರೂ ಮಾಡಿಲ್ಲ ಎಂದು ಅವರು ಹೇಳಿದರು.

ಈ ಸಂದರ್ಭದಲ್ಲಿ ವಿಧಾನಪರಿಷತ್ ಸದಸ್ಯ ಪುಟ್ಟಣ್ಣ, ಮಾಜಿ ಶಾಸಕ ಅಶ್ವತ್, ಮುಖಂಡರಾದ ರಘುನಂದನ್ ರಾಮಣ್ಣ, ಗುಂತೂರು ವಿಶ್ವನಾಥ್, ಎಂ.ಸಿ.ಕರಿಯಪ್ಪ, ಸುನಿಲ್ ಮತ್ತಿತರರು ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News