ರಾಜಕೀಯ ಪಕ್ಷಗಳು ಸಂವಿಧಾನದ ಆಶಯವನ್ನು ದುರ್ಬಲಗೊಳಿಸಿವೆ : ನಟ ಪ್ರಕಾಶ್ ರಾಜ್

Update: 2024-04-23 14:02 GMT

ಬೆಂಗಳೂರು : ಕೇಂದ್ರ ಸರಕಾರದ 10 ವರ್ಷಗಳ ಆಡಳಿತ ನಮ್ಮ ಕಣ್ಣ ಮುಂದೆ ಇದ್ದು, ರಾಜಕೀಯ ಪಕ್ಷಗಳು ಸಂವಿಧಾನದ ಆಶಯವನ್ನು ದುರ್ಬಲಗೊಳಿಸಿವೆ ಎಂದು ನಟ ಪ್ರಕಾಶ್ ರಾಜ್ ಅಭಿಪ್ರಾಯ ಪಟ್ಟರು.

ಮಂಗಳವಾರ ನಗರದ ಸೈಂಟ್ಸ್ ಮಾಕ್ರ್ಸ್ ರಸ್ತೆಯಲ್ಲಿರುವ ಆಸೀರ್ವಾದ್ ಕಟ್ಟಡದಲ್ಲಿ ಆಯೋಜಿಸಿದ್ದ ಸಂವಾದದಲ್ಲಿ ಮಾತನಾಡಿದ ಅವರು, ಲೋಕಸಭಾ ಚುನಾವಣೆಯು ನಡೆಯುತ್ತಿದ್ದು, ಇದಕ್ಕೆ ಪೂರ್ವಭಾವಿಯಾಗಿ ಒಂದೂವರೆ ವರ್ಷಕ್ಕೆ ಮುಂಚಿತವಾಗಿಯೇ ಯಾವ ಯಾವ ರಾಜ್ಯದಲ್ಲಿ ಸರಕಾರವನ್ನು ಹೊಡೆಯಬೇಕೋ ಅಲ್ಲೆಲ್ಲ ಬಿಜೆಪಿ ಯಶಸ್ವಿಯಾಗಿ ತನ್ನ ಕೆಲಸ ನಿರ್ವಹಿಸಿದೆ ಎಂದರು.

ಚಿಂತಕ ಯೂಸಪ್ ಕನ್ನಿ ಮಾತನಾಡಿ, ಹಿಂದಿನ ಲೋಕಸಭಾ ಚುನಾವಣೆಗೆ ಸಂಬಂಧಿಸಿ ಬೆಂಗಳೂರಿನ ಲೋಕಸಭಾ ಕ್ಷೇತ್ರಗಳಲ್ಲಿ ಸುಮಾರು 33 ಲಕ್ಷಕ್ಕೂ ಅಧಿಕ ಮತಗಳನ್ನು ಹಾಕಲಿಲ್ಲ. ಈ ಮತಗಳು ಜಾತ್ಯಾತೀತ ಮತಗಳಾಗಿದ್ದು, ಬಿಜೆಪಿಗೆ ಬೀಳುವುದಿಲ್ಲ. ಹೀಗಾಗಿ ಈ ಬಾರಿ ಶೇ.100ರಷ್ಟು ಮತದಾನ ನಡೆಯಬೇಕು ಎಂದರು.

2018ರ ವಿಧಾನಸಭಾ ಚುನಾವಣೆಯಲ್ಲಿ ಕೇವಲ ಶೇ.54ರಷ್ಟು ಅಲ್ಪಸಂಖ್ಯಾತರು ಮಾತ್ರ ಮತ ಹಾಕಿದ್ದಾರೆ. ಆದರೆ 2023ರ ವಿಧಾನಸಭಾ ಚುನಾವಣೆಯಲ್ಲಿ ಶೇ.70ರಷ್ಟು ಅಲ್ಪಸಂಖ್ಯಾತರು ಮತದಾನ ಮಾಡಿ, ಯಶಸ್ವಿಯಾಗಿದ್ದಾರೆ. ಹೀಗಾಗಿ ಈಗ ನಡೆಯುತ್ತಿರುವ ಲೋಕಸಭಾ ಚುನಾವಣೆಯಲ್ಲಿ ಶೇ.100ರಷ್ಟು ಮತದಾನ ಮಾಡಬೇಕು ಎಂದು ಅವರು ಕರೆ ನೀಡಿದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News