ಕಾರ್ಮಿಕರ ಬೇಡಿಕೆಗಳ ಈಡೇರಿಕೆಗೆ ‘ಎಐಟಿಯುಸಿ’ ಯಿಂದ ಫೆ.1ಕ್ಕೆ ಬಜೆಟ್ ಪೂರ್ವ ಕಾರ್ಯಕ್ರಮ

Update: 2024-01-14 20:17 IST
  • whatsapp icon

ಬೆಂಗಳೂರು: ಸಾರಿಗೆ ನಿಗಮಗಳ ನೌಕರರ ಹಾಗೂ ರಾಜ್ಯದ ಎಲ್ಲ ಕಾರ್ಮಿಕರ ಬೇಡಿಕೆಗಳ ಅನುಷ್ಠಾನಕ್ಕಾಗಿ ರಾಜ್ಯ ಸರಕಾರದ ಮೇಲೆ ಒತ್ತಾಯ ತರಲು 2024ರ ಫೆ.1ರಂದು ಬೆಂಗಳೂರಿನ ಫ್ರೀಡಂ ಪಾರ್ಕಿನಲ್ಲಿ ಬಜೆಟ್ ಪೂರ್ವ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದು ಆಲ್ ಇಂಡಿಯಾ ಟ್ರೇಡ್ ಯೂನಿಯನ್ ಕಾಂಗ್ರೆಸ್(ಎಐಟಿಯುಸಿ) ರಾಜ್ಯ ಸಮಿತಿಯು ತಿಳಿಸಿದೆ.

ರಾಜ್ಯ ಸರಕಾರವು 2020ರ ಜ.1ರಿಂದ ನಾಲ್ಕೂ ನಿಗಮಗಳ ಕಾರ್ಮಿಕರಿಗೆ ಸಲ್ಲಬೇಕಾಗಿರುವ ವೇತನ ಹೆಚ್ಚಳದ ಬಾಕಿ, ತುಟ್ಟಿ ಭತ್ಯೆ ಬಾಕಿ, ರಜೆ ನಗದೀಕರಣದ ಬಾಕಿ, ಭವಿಷ್ಯನಿಧಿ, ಜೀವವಿಮಾ ಕಂತು, ಸಹಕಾರ ಸಂಘಗಳ ವಂತಿಗೆ ಬಾಕಿ ಹಾಗೂ ಶಕ್ತಿ ಯೋಜನೆಯ ಅನುಷ್ಠಾನದ ಬಾಕಿ ಹಣ ಇತ್ಯಾದಿಗಳ ಕಡೆಗೆ ಬೇಕಾಗಿರುವ ಒಟ್ಟು ಹಣವನ್ನು ವಿಳಂಬವಿಲ್ಲದೆ ಬಿಡುಗಡೆ ಮಾಡಬೇಕು ಎಂಬ ಬೇಡಿಕೆಗಳ ಬಗ್ಗೆ ಬಜೆಟ್ ಪೂರ್ವ ಕಾರ್ಯಕ್ರಮದಲ್ಲಿ ಚರ್ಚಿಸಲಾಗುತ್ತದೆ ಎಂದು ಎಐಟಿಯುಸಿ ತಿಳಿಸಿದೆ.

2024ರ ಜ.1ರಿಂದ ನಾಲ್ಕು ವರ್ಷಗಳ ಅವಧಿಗೆ ವೇತನ ಒಪ್ಪಂದ ಮತ್ತಿತರ ಬೇಡಿಕೆಗಳನ್ನು ವಿಳಂಬವಿಲ್ಲದೆ ಜಂಟಿ ಕ್ರಿಯಾ ಸಮಿತಿ ಜೊತೆ ಚರ್ಚಿಸಿ ಬಗೆಹರಿಸಬೇಕು ಸೇರಿದಂತೆ ಹಲವು ಬೇಡಿಕೆಗಳ ಬಗ್ಗೆ ಚರ್ಚಿಸಲಾಗುತ್ತದೆ ಎಂದು ಎಐಟಿಯುಸಿ, ಕೆಎಸ್ಸಾರ್ಟಿಸಿ ಸ್ಟಾಫ್ ಅಂಡ್ ವರ್ಕರ್ಸ್ ಫೆಡರೇಷನ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News