ಬಿಬಿಎಂಪಿ ವ್ಯಾಪ್ತಿಯಲ್ಲಿ ಆಸ್ತಿ ತೆರಿಗೆ ಬಾಕಿ ಉಳಿಸಿಕೊಂಡವರಿಗೆ ಅರ್ಧ ತೆರಿಗೆ ಪಾವತಿ ಮಾಡಲು ಅವಕಾಶ: ತುಷಾರ್ ಗಿರಿನಾಥ್
Update: 2024-02-06 14:48 GMT
ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯಲ್ಲಿ ಆಸ್ತಿ ತೆರಿಗೆ ಬಾಕಿ ಉಳಿಸಿಕೊಂಡವರಿಗೆ ಅರ್ಧ ತೆರಿಗೆ ಪಾವತಿ ಮಾಡಲು ಅವಕಾಶ ಕಲ್ಪಿಸಲಾಗಿದೆ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ತಿಳಿಸಿದ್ದಾರೆ.
ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಆರ್ಥಿಕ ವರ್ಷ ಮುಗಿಯುವುದರೊಳಗೆ ಆದಾಯ ಗುರಿ ತಲುಪಲು ಬಿಬಿಎಂಪಿ ನಿರ್ಧರಿಸಿದೆ. ಹಾಗಾಗಿ ಆಸ್ತಿ ತೆರೆಗೆ ಪಾವತಿ ಮಾಡದೆ ಇರುವವರು ಸ್ಥಳೀಯ ಕಂದಾಯ ಕಚೇರಿಯಲ್ಲಿ ಅರ್ಧ ತೆರಿಗೆಯನ್ನು ಕಟ್ಟಿ, ಉಳಿದರರ್ಧ ತೆರಿಗೆ ಮನ್ನಾ ಮಾಡಲು ಮನವಿ ಸಲ್ಲಿಸಬೇಕು ಎಂದರು.
ಮನವಿ ವಿಲೇವಾರಿ ಮಾಡಿದ ಬಳಿಕ ಶೇ.50 ತೆರಿಗೆಯಿಂದ ಜನರಿಗೆ ವಿನಾಯಿತಿ ಸಿಗಲಿದೆ. ಆದಾಯ ಗುರಿ 4,300 ಕೋಟಿ ಗುರಿ ತಲುಪಲು ವಿಶೇಷ ರಿಯಾಯಿತಿ ಡ್ರೈವ್ ಆರಂಭಿಸಲಾಗಿದೆ ಎಂದು ಅವರು ಮಾಹಿತಿ ನೀಡಿದರು.