ಬಿಬಿಎಂಪಿ ಬಜೆಟ್‍ಗೆ ಸಾರ್ವಜನಿಕರಿಂದ ಸಲಹೆ ಆಹ್ವಾನ

Update: 2024-02-06 15:52 GMT

ಬೆಂಗಳೂರು: ನಗರವನ್ನು ಉತ್ತಮಗೊಳಿಸಲು ಹೊಸ ಆಲೋಚನೆಗಳನ್ನು ಅಳವಡಿಸಿಕೊಳ್ಳಲು ಮುಂದಾಗಿರುವ ಬಿಬಿಎಂಪಿ 2024-25ನೆ ಸಾಲಿನ ವಾರ್ಷಿಕ ಬಜೆಟ್‍ಗೆ ಸಾರ್ವಜನಿಕ ಸಲಹೆಗಳನ್ನು ಆಹ್ವಾನಿಸಿದೆ.

2024-25ನೆ ಸಾಲಿನ ಬಿಬಿಎಂಪಿ ಬಜೆಟ್ ಮಂಡನೆಗೆ ಸಿದ್ಧತೆ ನಡೆಯುತ್ತಿದ್ದು, ಬಜೆಟ್ ತಯಾರಿಗೆ ಸಾರ್ವಜನಿಕರಿಂದ ಸಲಹೆಗಳನ್ನು ಆಹ್ವಾನಿಸಲಾಗಿದೆ. ಈಗಾಗಲೇ 20 ಸಾವಿರಕ್ಕೂ ಹೆಚ್ಚು ಸಲಹೆಗಳು ಬಂದಿವೆ. ಬಿಬಿಎಂಪಿ ಕೇಂದ್ರ ಕಚೇರಿಯ ಪ್ರವೇಶ ದ್ವಾರದಲ್ಲಿ ಅಧಿಕಾರಿಗಳು ಸಲಹೆ ಪೆಟ್ಟಿಗೆ ಇರಿಸಿದ್ದು, ಫೆ.10ರವರೆಗೆ ಜನರು ತಮ್ಮ ಸಲಹೆಗಳನ್ನ ನೀಡಬಹುದಾಗಿದೆ.

ಪಾಲಿಕೆಯ ಎಲ್ಲ ವಲಯದ ಆರ್‌ಒ, ಎಆರ್‌ಒ, ಇಂಜಿನಿಯರ್ ನೇತೃತ್ವದಲ್ಲಿ ಸಲಹೆ ಸಂಗ್ರಹವಾಗಿದೆ. ಆನ್ ಲೈನ್ ಮುಖಾಂತರವೂ ಸಲಹೆಗಳು ಬಂದಿದೆ. ರಸ್ತೆ, ಒಳಚರಂಡಿ, ರಾಜಕಾಲುವೆ, ನೀರಿನ ಸಮಸ್ಯೆಗಳ ಬಗ್ಗೆಯೇ ಹೆಚ್ಚು ಸಲಹೆಗಳು ಬಂದಿದ್ದು, ಬಜೆಟ್ ತಯಾರಿಗೆ ಸಾರ್ವಜನಿಕರ ಸಲಹೆಗಳನ್ನು ಅಳವಡಿಸಿಕೊಳ್ಳಲು ಪಾಲಿಕೆ ಯೋಜನೆ ರೂಪಿಸಿದೆ.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News