ಬೆಂಗಳೂರಿನ ಹಲವೆಡೆ ಧಾರಾಕಾರ ಮಳೆ

Update: 2024-10-05 16:43 GMT

ಬೆಂಗಳೂರು : ನಗರದ ಎಚ್‍ಎಸ್‍ಆರ್ ಬಡಾವಣೆ, ಹಂಪಿನಗರ, ಬಾಗಲಗುಂಟೆ, ವರ್ತೂರು, ದೊಡ್ಡಾನೆಕುಂದಿ, ಆರ್‌ಆರ್ ನಗರ, ರಾಹಮಹಲ್ ಗುಟ್ಟಹಳ್ಳಿ, ವಿ.ನಾಗೇನಹಳ್ಳಿ, ಶೆಟ್ಟಿಹಳ್ಳಿ, ಕಾಡುಗೋಡಿ, ಹಗದೂರು, ಸಿಂಗಸಂದ್ರ, ಕೋರಮಂಗಲ, ವಿಜಯನಗರ, ಚಾಮರಾಜಪೇಟೆ, ಮೆಜೆಸ್ಟಿಕ್ ಸುತ್ತಮುತ್ತ ಸೇರಿ ನಗರದ ಹಲವೆಡೆ ಧಾರಾಕಾರ ಮಳೆಯಾಗಿದೆ.

ಶುಕ್ರವಾರ ರಾತ್ರಿಯಿಂದ ಸುರಿದ ಮಳೆ ಮತ್ತೆ ಶನಿವಾರ ಸಂಜೆ ವೇಳೆ ಸುರಿಯುತ್ತಿರುವ ಕಾರಣದಿಂದ ಕೆಲ ಹೊತ್ತು ಟ್ರಾಫಿಕ್ ಸಿಗ್ನಲ್‍ಗಳಲ್ಲಿ ಸಂಚಾರ ದಟ್ಟಣೆ, ಪ್ರಮುಖ ರಸ್ತೆಗಳ ಮೇಲೆ ನೀರು ಹರಿದ ಪರಿಣಾಮವಾಗಿ ವಾಹನ ಸವಾರರು ಪರದಾಡುವಂತಾಯಿತು.

ತಗ್ಗು ಪ್ರದೇಶಗಳಲ್ಲಿ ಮತ್ತು ರಸ್ತೆ ಅಂಡರ್‌ ಪಾಸ್‍ಗಳಲ್ಲಿ ನೀರು ನಿಂತು ಅಸ್ತವ್ಯಸ್ತವುಂಟಾಯಿತು. ಮಳೆಯಿಂದಾಗಿ ಸರ್ಜಾಪುರ ರಸ್ತೆಯಲ್ಲಿ ನೀರು ನಿಂತುಕೊಂಡಿದೆ. ಕಳೆದ ಮೂರ್ನಾಲ್ಕು ದಿನಗಳಿಂದ ರಸ್ತೆಯಲ್ಲಿ ನೀರು ತುಂಬಿಕೊಂಡಿರುವ ಕಾರಣ ಅವಾಂತರ ಸೃಷ್ಠಿಯಾಗಿದೆ.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News