12,369 ಕೋಟಿ ರೂ.ಗಾತ್ರದ ಬಿಬಿಎಂಪಿ ಬಜೆಟ್ ಮಂಡನೆ
Update: 2024-02-29 16:08 GMT
ಬೆಂಗಳೂರು, ಫೆ.29: ಬಿಬಿಎಂಪಿಯ 2024-25ನೆ ಸಾಲಿನ ವಾರ್ಷಿಕ ಬಜೆಟ್ ಅನ್ನು ಹಣಕಾಸು ವಿಭಾಗದ ವಿಶೇಷ ಆಯುಕ್ತ ಶಿವಾನಂದ ಕಲಕೇರಿ ಗುರುವಾರದಂದು ಇಲ್ಲಿನ ಪುರಭವನದಲ್ಲಿ ಪ್ರಕಟಿಸಿದ್ದು, ಬಜೆಟ್ನ ಗಾತ್ರ 12,369.46 ಕೋಟಿ ರೂ.ಆಗಿದೆ. ಒಟ್ಟು 2.17ಕೋಟಿ ರೂ.ಉಳಿತಾಯದ ಬಜೆಟ್ ಅನ್ನು ಈ ಬಾರಿ ಮಂಡಿಸಲಾಗಿದೆ.
2024-25ನೇ ವರ್ಷದಲ್ಲಿ ಪಾಲಿಕೆಯ ಸ್ವಂತ ಸಂಪನ್ಮೂಲಗಳಿಂದ ಆದಾಯವು ಪ್ರಾರಂಭಿಕ ಶುಲ್ಕ ಸೇರಿ 8,294.04 ಕೋಟಿ ರೂ.ಗಳಷ್ಟು ಇರಲಿದ್ದು, ಕೇಂದ್ರ-ರಾಜ್ಯ ಅನುದಾನಗಳು 4,077.59 ಕೋಟಿ ರೂ.ಗಳಷ್ಟು ಇರಲಿವೆ. ಒಟ್ಟು ಸ್ವೀಕೃತಿ 12,371.63 ಕೋಟಿ ರೂ.ಗಳಷ್ಟು ಇದ್ದರೆ, ಒಟ್ಟು ಖರ್ಚು 12,369.46 ಕೋಟಿ ರೂ. ಇರಲಿದ್ದು, 2.17 ಕೋಟಿ ರೂ.ಉಳಿತಾಯ ಬಜೆಟ್ನಲ್ಲಿದೆ.
ಚುನಾಯಿತ ಜನಪ್ರತಿನಿಧಿಗಳಿಲ್ಲದೆ ಸತತ ನಾಲ್ಕನೇ ಬಾರಿಯೂ ಅಧಿಕಾರಿಗಳೇ ಬಿಬಿಎಂಪಿ ಬಜೆಟ್ ಅನ್ನು ಮಂಡಿಸಿದ್ದಾರೆ. ಹಿಂದಿನ ಮೂರು ಬಾರಿಯೂ ಬಿಬಿಎಂಪಿ ಹಣಕಾಸು ವಿಶೇಷ ಆಯುಕ್ತರೇ ಬಜೆಟ್ ಮಂಡಿಸಿದ್ದರು.