ಅಶೋಕ್‍ ಅವರನ್ನು ಪ್ರತಿಪಕ್ಷ ನಾಯಕ ಸ್ಥಾನದಿಂದ ಕೆಳಗಿಳಿಸಿ : ಬಿ.ವೈ.ವಿಜಯೇಂದ್ರಗೆ ವಿಎಚ್‌ಪಿ ಒತ್ತಾಯ

Update: 2024-02-23 16:15 GMT

ಬೆಂಗಳೂರು : ಬಜೆಟ್ ಅಧಿವೇಶನ ಕಲಾಪದಲ್ಲಿ ‘ನಾನು ಗೃಹ ಸಚಿವನಾಗಿದ್ದ ವೇಳೆ ಭಜರಂಗದಳ ಕಾರ್ಯಕರ್ತರ ಮೇಲೆಯೇ ಗೂಂಡಾ ಕಾಯ್ದೆ ಹಾಕಿದ್ದೆ’ ಎಂಬ ಹೇಳಿಕೆ ನೀಡಿದ್ದ ಆರ್.ಅಶೋಕ್ ಅವರನ್ನು ಕೂಡಲೇ ಪ್ರತಿಪಕ್ಷ ನಾಯಕ ಸ್ಥಾನದಿಂದ ಕೆಳಗಿಳಿಸಬೇಕೆಂದು ಕೋರಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರಿಗೆ ಮನವಿ ಮಾಡಲಾಗಿದೆ.

ಶುಕ್ರವಾರ ವಿಜಯೇಂದ್ರ ಅವರನ್ನು ಖುದ್ದು ಭೇಟಿ ಮಾಡಿ ಮನವಿ ಸಲ್ಲಿಸಿರುವ ವಿಶ್ವ ಹಿಂದೂ ಪರಿಷತ್ ಮುಖಂಡ ಶರಣ್ ಪಂಪ್‍ವೆಲ್, ಆರ್.ಅಶೋಕ್ ಅಧಿವೇಶನದಲ್ಲಿ ಭಜರಂಗದಳದ ಕಾರ್ಯಕರ್ತರ ಮೇಲೆ ಗೂಂಡಾ ಕಾಯ್ದೆ ಹಾಕಿದ್ದೆ’ ಎನ್ನುವ ಮೂಲಕ ಪರಿವಾರದ ಕಾರ್ಯಕರ್ತರಿಗೆ ನೋವುಂಟು ಮಾಡಿದ್ದಾರೆ. ಅವರನ್ನು ತಕ್ಷಣವೇ ವಿಪಕ್ಷ ನಾಯಕನ ಸ್ಥಾನದಿಂದ ಕೆಳಗಿಳಿಸಬೇಕು. ಅವರು ರಾಜ್ಯದ ಹಿಂದೂ ಕಾರ್ಯಕರ್ತರ ಕ್ಷಮೆ ಕೇಳಬೇಕು’ ಎಂದು ಆಗ್ರಹಿಸಿದ್ದಾರೆ.

ರಾಮನಗರದ ವಕೀಲರು ಪ್ರತಿಭಟನೆ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡುವ ವೇಳೆ ಅಶೋಕ್, ಭಜರಂಗ ದಳದ ವಿರುದ್ಧ ಅಶೋಕ್ ಆಕ್ರೋಶ ವ್ಯಕ್ತಪಡಿಸಿದ್ದರು. ಈ ಮಧ್ಯೆ ಸಂಘ ಪರಿವಾರದ ಮುಖಂಡ ಪುನೀತ್ ಅತ್ತಾವರ, ‘ನೀವು ಆರ್.ಅಶೋಕ್ ಅಲ್ಲ. ನಿಮ್ಮ ಹೆಸರನ್ನು ಎ. ಅಶೋಕ್ ಎಂದು ಬದಲಾಯಿಸಿ ಬಿಡಿ. ನೀವು ಅಡ್ಜಸ್ಟ್ ಮೆಂಟ್ ಅಶೋಕ್’ ಎಂದು ಜಾಲತಾಣದಲ್ಲಿ ಬರೆದುಕೊಂಡಿದ್ದು ಆಕ್ಷೇಪಕ್ಕೆ ಕಾರಣವಾಗಿತ್ತು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News