ವಿಕ್ರಂ ಗೌಡ ಎನ್‌ಕೌಂಟರ್‌ | ನ್ಯಾಯಾಂಗ ತನಿಖೆಗೆ ಸಿಪಿಐ(ಎಂ) ಆಗ್ರಹ

Update: 2024-11-20 15:29 GMT

ವಿಕ್ರಂ ಗೌಡ

ಬೆಂಗಳೂರು: ಪೊಲಿಸರ ಎನ್‍ಕೌಂಟರ್‌ಗೆ ಬಲಿಯಾದ ನಕ್ಸಲ್‍ ವಿಕ್ರಂಗೌಡ ಪ್ರಕರಣವನ್ನು ರಾಜ್ಯ ಸರಕಾರ ನ್ಯಾಯಾಂಗ ತನಿಖೆಗೊಳಪಡಿಸಬೇಕೆಂದು ಭಾರತ ಕಮ್ಯುನಿಸ್ಟ್ ಪಕ್ಷ (ಮಾಕ್ರ್ಸವಾದಿ) ರಾಜ್ಯ ಸಮಿತಿ ಆಗ್ರಹಿಸಿದೆ.

ಮಂಗಳವಾರ ಪೋಲಿಸರೊಂದಿಗಿನ ಗುಂಡಿನ ಚಕಮಕಿಯಲ್ಲಿ ನಕ್ಸಲ್‌ ವಿಕ್ರಂ ಗೌಡ ಹತ್ಯೆಯಾಗಿದೆ ಎಂದು ತಿಳಿಸಿದ್ದಾರೆ. ಆದರೆ 50-60 ಜನರ ಸಶಸ್ತ್ರ ಪೋಲೀಸರ ತಂಡಕ್ಕೆ ನಾಲ್ಕು ಜನ ನಕ್ಸಲರ ತಂಡವನ್ನು ಬಂಧಿಸಲಾಗಲಿಲ್ಲ ಎನ್ನುವುದು ಮತ್ತು ಎನ್‌ಕೌಂಟರ್‌ ಹೆಸರಲ್ಲಿ ಕೊಂದಿರುವುದು ಅನುಮಾನಗಳನ್ನು ಮೂಡಿಸುತ್ತದೆ ಎಂದು ಸಿಪಿಐ(ಎಂ) ತಿಳಿಸಿದೆ.

ಬಂಧಿಸಲು ಅವಕಾಶವಿರುವಾಗ ಎನ್‍ಕೌಂಟರ್ ಹೆಸರಲ್ಲಿ ಯಾವುದೇ ವ್ಯಕ್ತಿಯ ಹತ್ಯೆ ಮಾಡುವುದನ್ನು ಸಿಪಿಎಂ ವಿರೋಧಿಸುತ್ತದೆ. ರಾಜ್ಯದ ಜನತೆ ಈ ಪ್ರಕರಣದ ನಿಜಾಂಶ ತಿಳಿಯಬೇಕಿರುವುದರಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಈ ಪ್ರಕರಣವನ್ನು ಕೂಲಂಕಶವಾಗಿ ನ್ಯಾಯಾಂಗ ತನಿಖೆಗೊಳಪಡಿಸಬೇಕು ಎಂದು ಸಿಪಿಐ(ಎಂ) ಆಗ್ರಹಿಸಿದೆ.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News