ಅಪರಾಧ ಹಿನ್ನೆಲೆಯ ಅದಾನಿಯನ್ನು ಮೋದಿ ರಕ್ಷಿಸುವುದೇಕೆ? : ದಿನೇಶ್ ಗುಂಡೂರಾವ್ ಪ್ರಶ್ನೆ

Update: 2024-11-22 16:25 GMT

ದಿನೇಶ್ ಗುಂಡೂರಾವ್

ಬೆಂಗಳೂರು : ‘ಪ್ರಧಾನಿ ಮೋದಿಯವರ ಅತ್ಯಾಪ್ತ ಗೆಳೆಯ ಅದಾನಿ ಬಂಧನಕ್ಕೆ ಅಮೆರಿಕ ಕೋರ್ಟ್ ವಾರೆಂಟ್ ಹೊರಡಿಸಿದೆ. ಇಂತಹ ಅಪರಾಧ ಹಿನ್ನೆಲೆಯಿರುವ ಗೌತಮ್ ಅದಾನಿಯವರನ್ನು ಮೋದಿಯವರು ರಕ್ಷಿಸುವುದ್ಯಾಕೆ?’ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಪ್ರಶ್ನಿಸಿದ್ದಾರೆ.

ಶುಕ್ರವಾರ ಎಕ್ಸ್‌ನಲ್ಲಿ ಪೋಸ್ಟ್ ಹಾಕಿರುವ ಅವರು, ಗೌತಮ್ ಅದಾನಿ ಭಾರತದಲ್ಲಿ ತಮ್ಮ ಉದ್ಯಮ ವಿಸ್ತರಿಸಲು ಅಧಿಕಾರಿಗಳಿಗೆ 2,100 ಕೋಟಿ ರೂ.ಗೂ ಅಧಿಕ ಲಂಚದ ಅಮಿಷ ಒಡ್ಡಿದ್ದಾರೆ. ಆ ಲಂಚದ ಹಣವನ್ನು ವಿದೇಶಿ ಹೂಡಿಕೆದಾರರಿಂದ ಪಡೆದ ಆರೋಪದ ಮೇಲೆ ಅದಾನಿ ವಿರುದ್ಧ ದೋಷಾರೋಪ ಪಟ್ಟಿ ಸಲ್ಲಿಕೆಯಾಗಿದೆ. ಈ ಪ್ರಕರಣದ ಬಳಿಕ ಅದಾನಿ ಒಬ್ಬ ವೃತ್ತಿಪರ ಅಪರಾಧಿ ಎಂದು ಮತ್ತೊಮ್ಮೆ ಸಾಬೀತಾಗಿದೆ ಎಂದು ಗಮನ ಸೆಳೆದಿದ್ದಾರೆ.

‘ಪ್ರತಿ ಭಾರಿ ಸಂಪತ್ತಿನ ಹಿಂದೆ ಒಂದೋ ಅಕ್ರಮವಿರುತ್ತದೆ, ಇಲ್ಲವೆ ಅಪರಾಧವಿರುತ್ತದೆʼ ಎಂಬುದು ಲೋಕರೂಢಿ ಮಾತು. ಮೋದಿಯವರ ಅತ್ಯಾಪ್ತ ಗೆಳೆಯ ಅದಾನಿ ಗಳಿಸಿರುವ ಸಂಪತ್ತಿನ ಹಿಂದೆ ಇಂತಹ ಹಲವು ಅಕ್ರಮಗಳು ಹಾಗೂ ಅಪರಾಧಗಳ ಸರಮಾಲೆಯೇ ಇದೆ ಎಂದು ದಿನೇಶ್ ಗುಂಡೂರಾವ್ ಟೀಕಿಸಿದ್ದಾರೆ.

ಅದಾನಿಯವರು ತಮ್ಮ ಉದ್ಯಮ ವ್ಯವಹಾರ ವಿಸ್ತರಿಸಲು ಇಡಿ ವ್ಯವಸ್ಥೆಯನ್ನೇ ಭ್ರಷ್ಟ ಮಾಡುವ ಕಲೆ ಸಿದ್ದಿಸಿಕೊಂಡಿದ್ದಾರೆ. ಇಂತಹ ಭ್ರಷ್ಟ ಉದ್ಯಮಿಯನ್ನು ತಮ್ಮ ಆಪ್ತ ವಲಯದಲ್ಲಿ ಬಿಟ್ಟುಕೊಂಡಿರುವ ಮೋದಿಯವರ ಪ್ರಾಮಾಣಿಕತೆಯ ಬಗ್ಗೆಯೂ ಅನುಮಾನ ಮೂಡುವುದಿಲ್ಲವೆ?’ ಎಂದು ಅವರು ಕೇಳಿದ್ದಾರೆ.

Full View

Tags:    

Writer - ವಾರ್ತಾಭಾರತಿ

contributor

Editor - Ashik

contributor

Byline - ವಾರ್ತಾಭಾರತಿ

contributor

Similar News