ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್‌ ಮನವಿಗೆ ಸ್ಪಂದಿಸಿ ಗ್ರಂಥಾಲಯಕ್ಕೆ ʼಗೃಹಲಕ್ಷ್ಮಿʼ ಎಂದು ಹೆಸರಿಟ್ಟ ಮಹಿಳೆ

Update: 2024-10-23 13:29 IST
ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್‌ ಮನವಿಗೆ ಸ್ಪಂದಿಸಿ ಗ್ರಂಥಾಲಯಕ್ಕೆ ʼಗೃಹಲಕ್ಷ್ಮಿʼ ಎಂದು ಹೆಸರಿಟ್ಟ ಮಹಿಳೆ
  • whatsapp icon

ಬೆಳಗಾವಿ : ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವರಾದ ಲಕ್ಷ್ಮೀ ಹೆಬ್ಬಾಳ್ಕರ್‌ ಅವರ ಮನವಿಗೆ ಸ್ಪಂದಿಸಿದ ರಾಯಬಾಗ ತಾಲೂಕಿನ ಮಂಟೂರು ಗ್ರಾಮದ ಮಲ್ಲವ್ವ ಮೇಟಿ ಎಂಬವರು ತಾವು ನಿರ್ಮಿಸಿದ ಗ್ರಂಥಾಲಯಕ್ಕೆ ʼಗೃಹಲಕ್ಷ್ಮಿʼ ಎಂದು ಹೆಸರಿಟ್ಟಿದ್ದಾರೆ.

ಕರ್ನಾಟಕ ರಾಜ್ಯ ಸರಕಾರದ ಮಹತ್ವಾಕಾಂಕ್ಷೆಯ ʼಗೃಹಲಕ್ಷ್ಮಿʼ ಯೋಜನೆಯು ರಾಜ್ಯದ ಜನರ ಮನ ಗೆದ್ದಿರುವುದಕ್ಕೆ ಇದು  ಉದಾಹರಣೆಯಾಗಿದೆ. ಮಲ್ಲವ್ವ ಮೇಟಿ ಅವರ ನಿಸ್ವಾರ್ಥ ಸೇವೆಯನ್ನು ಪ್ರಶಂಸಿಸಿದ ಸಚಿವರು, ರಾಷ್ಟ್ರಕವಿ ಕುವೆಂಪು ಅವರು‌ ಬರೆದಿರುವ ʼಕಾನೂರು ಹೆಗ್ಗಡತಿʼ ಎಂಬ ಪುಸ್ತಕವನ್ನು ಗ್ರಂಥಾಲಯಕ್ಕೆ ಉಡುಗೊರೆ ನೀಡಿದ್ದರು.‌

ಕಳೆದ ಒಂದು ವರ್ಷದ ಗೃಹಲಕ್ಷ್ಮಿ ಯೋಜನೆಯ ಮೊತ್ತವನ್ನು ಕೂಡಿಟ್ಟಿದ್ದ ಮಲ್ಲವ್ವ ಮೇಟಿ, ಗ್ರಾಮದ ಶಾಲಾ-ಕಾಲೇಜು ವಿದ್ಯಾರ್ಥಿಗಳ ಅನುಕೂಲಕ್ಕಾಗಿ, ಸ್ಪರ್ಧಾತ್ಮಕ ಪರೀಕ್ಷಾರ್ಥಿಗಳಿಗಾಗಿ ಗ್ರಂಥಾಲಯವನ್ನು ನಿರ್ಮಿಸಿದ್ದರು. ಮಲ್ಲವ್ವ ಮೇಟಿ ಕಾರ್ಯವನ್ನು ಮೆಚ್ಚಿದ್ದ ಸಚಿವರು, ಗ್ರಂಥಾಲಯಕ್ಕೆ ʼಗೃಹಲಕ್ಷ್ಮಿʼ ಗ್ರಂಥಾಲಯ ಎಂದು ಹೆಸರಿಡಬೇಕು ಎಂದು ಮನವಿ ಮಾಡಿದ್ದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News