ಯಡಿಯೂರಪ್ಪ ಮಹಾ ಭ್ರಷ್ಟ, ಕೋವಿಡ್ ಸಂದರ್ಭದಲ್ಲಿ ಲೂಟಿ ಮಾಡಿದ್ದಾನೆ : ಯತ್ನಾಳ್ ವಾಗ್ದಾಳಿ

ಯಡಿಯೂರಪ್ಪ/ಯತ್ನಾಳ್
ಬೆಳಗಾವಿ : ನಾವು ಹೊಸ ಪಕ್ಷವನ್ನು ಕಟ್ಟಿದರೆ ಕಾಂಗ್ರೆಸ್‍ಗೆ ಹೆಚ್ಚಿನ ಅನುಕೂಲವಾಗುತ್ತದೆ. ಹೀಗಾಗಿ ಯೋಚನೆ ಮಾಡುತ್ತಿದ್ದೇವೆ ಎಂದು ಬಿಜೆಪಿ ಉಚ್ಛಾಟಿತ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ತಿಳಿಸಿದ್ದಾರೆ.
ಸೋಮವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹೊಸ ಪಕ್ಷ ಕಟ್ಟಿ ಹಿಂದೂಪರ ದ್ವನಿ ಆಗುವಂತೆ ರಾಜ್ಯಾದ್ಯಂತ ಹಿಂದೂಗಳ ಕೂಗಿದೆ. ಈಗಾಗಲೇ ಬಹಳ ಜನ ಆರ್ಥಿಕವಾಗಿ ಬೆಂಬಲ ಕೊಡುವುದಾಗಿಯೂ ತಿಳಿಸಿದ್ದಾರೆ. ಈ ಬಗ್ಗೆ ಚರ್ಚಿಸಿ ನಿರ್ಧರಿಸಲಾಗುವುದು ಎಂದರು.
ನಾವು ಹೊಸ ಪಕ್ಷ ಕಟ್ಟಿದ ಮೇಲೆ ಕಾಂಗ್ರೆಸ್ ಕಡೆಯಿಂದ ಹಣ ಪಡೆದು ಕಟ್ಟಿದ್ದಾನೆ ಎಂಬ ಆರೋಪಗಳು ಬರುತ್ತವೆ. ಇದೆಲ್ಲರ ಬಗ್ಗೆಯೂ ಗಂಭೀರವಾಗಿ ಚರ್ಚಿಸಿ ತೀರ್ಮಾನ ಕೈಗೊಳ್ಳಲಾಗುವುದು ಎಂದು ಯತ್ನಾಳ್ ಹೇಳಿದರು.
ಯಡಿಯೂರಪ್ಪ ಮಹಾ ಭ್ರಷ್ಟ: ಬಿ.ಎಸ್.ಯಡಿಯೂರಪ್ಪ ಮಹಾ ಭ್ರಷ್ಟ. ಕೋವಿಡ್ ಸೋಂಕಿನ ಸಂದರ್ಭದಲ್ಲಿ ಲೂಟಿ ಮಾಡಿದ್ದಾನೆ. ವಿದೇಶದಲ್ಲಿ ಆಸ್ತಿ ಮಾಡಿದ್ದಾನೆ. ಆತನಿಗೆ ಸಿದ್ದರಾಮಯ್ಯನ ಬಗ್ಗೆ ಮಾತನಾಡುವ ನೈತಿಕತೆ ಇಲ್ಲ ಎಂದು ಯತ್ನಾಳ್ ವಾಗ್ದಾಳಿ ನಡೆಸಿದರು.