ಬೀದರ್ | ಮಹಾವೀರರು ಅಹಿಂಸೆ, ಸತ್ಯ, ಮಾನವೀಯತೆಗಾಗಿ ತಮ್ಮ ಜೀವನ ಮುಡಿಪಾಗಿಟ್ಟಿದ್ದರು : ಪ್ರೊ.ಬಿ.ಎಸ್.ಬಿರಾದಾರ್

Update: 2025-04-10 19:24 IST
Photo of Program
  • whatsapp icon

ಬೀದರ್ : ಮಹಾವೀರರು ಅಹಿಂಸೆ, ಸತ್ಯ, ಮಾನವೀಯತೆಗಾಗಿಯೇ ಜೀವನವನ್ನು ಮುಡಿಪಾಗಿಟ್ಟ ಮಹನೀಯರಾಗಿದ್ದಾರೆ ಎಂದು ಬೀದರ್‌ ವಿಶ್ವವಿದ್ಯಾಲಯದ ಕುಲಪತಿಗಳಾದ ಪ್ರೊ.ಬಿ.ಎಸ್.ಬಿರಾದಾರ್ ಅವರು ನುಡಿದರು.

ಇಂದು ಬೀದರ್ ವಿಶ್ವವಿದ್ಯಾಲಯದ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ʼಭಗವಾನ್ ಮಹಾವೀರರ ಜಯಂತಿ ಕಾರ್ಯಕ್ರಮʼ ನೆರವೇರಿಸಿ ಅವರು ಮಾತನಾಡಿದರು.

ಮಹಾವಿರರಂತೆ ನಮ್ಮ ಜೀವನವೂ ಸಹ ಅವರ ಸಂದೇಶಗಳಂತೆ ಒಳ್ಳೆಯದಕ್ಕಾಗಿ ಮೀಸಲಿಡಬೇಕು. 6ನೇ ಶತಮಾನದಲ್ಲಿ ಜೈನ ಧರ್ಮದ 24ನೇ ತೀರ್ಥಂಕರರಾಗಿದ್ದ ಮಹಾವೀರರು ಸುಖ, ಸಂಪತ್ತಿನ ಜೀವನವನ್ನು ತ್ಯಜಿಸಿ, ಅಲೌಕಿಕ ಬದುಕಿನೆಡೆಗೆ ದಾಪುಗಾಲು ಹಾಕಿದರು. ಸಕಲ ಪ್ರಾಣಿಗಳ ಲೇಸು ಬಯಸುತ್ತಾ ಮರು ಜನ್ಮದಲ್ಲಿ ನಂಬಿಕೆ ಇಟ್ಟು ಸಾಂಸಾರಿಕ ಸುಖವನ್ನು ತ್ಯಜಿಸಿದರು. ಅವರ ಜೀವನ ಸಂದೇಶ ಪ್ರಸ್ತುತ ಸಮಾಜದಲ್ಲಿ ಆಧ್ಯಾತ್ಮಿಕ ನೆಲೆಯನ್ನು ಕಟ್ಟಿಕೊಳ್ಳುವಲ್ಲಿ ಪ್ರೇರಣೆಯಾಗಿದೆ ಎಂದು ಅವರು ತಿಳಿಸಿದರು.

ಜಗತ್ತಿನಲ್ಲಿ ಅಹಿಂಸೆಗಿಂತ ಮಿಗಿಲಾದ ಧರ್ಮ ಮತ್ತೊಂದಿಲ್ಲ. ಸಕಲ ಜೀವಗಳಿಗೆ ಕರುಣೆ, ಪ್ರೀತಿ, ವಾತ್ಸಲ್ಯದಿಂದ ಗೌರವಿಸಿದಾಗ ಮಾತ್ರ ಪ್ರತಿಯೊಂದು ಧರ್ಮ ಶ್ರೇಷ್ಠವಾಗುತ್ತದೆ ಎಂದು ಅವರು ಹೇಳಿದರು.

ಈ ಸಂದರ್ಭದಲ್ಲಿ ವಿಶ್ವವಿದ್ಯಾಲಯದ ಆಡಳಿತ ಕುಲಸಚಿವೆ ಆಡಳಿತ ಸುರೇಖಾ, ಉಪನ್ಯಾಸಕರಾದ ಡಾ.ತುಕಾರಾಮ್ ಮೇತ್ರೆ, ಶಿವಶಂಕರ್ ಹಾಗೂ ಸುರೇಶ್ ಎಂ. ಅವರು ಸೇರಿದಂತೆ ಬೋಧಕ, ಬೋಧಕೇತರ ಸಿಬ್ಬಂದಿ ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - Ashik

contributor

Byline - ವಾರ್ತಾಭಾರತಿ

contributor

Similar News