ರೈಲಿಗೆ ಸಿಲುಕಿ ಇಂಜಿನಿಯರಿಂಗ್ ವಿದ್ಯಾರ್ಥಿ ಮೃತ್ಯು
Update: 2023-12-06 18:11 GMT
ಕಡೂರು: ರೈಲಿಗೆ ಸಿಲುಕಿ ಯುವಕನೋರ್ವ ಮೃತಪಟ್ಟಿರುವ ಘಟನೆ ಮಂಗಳವಾರ ನಡೆದಿದ್ದು, ಮೃತ ಯುವಕನನ್ನು ತಾಲೂಕಿನ ಸೊಲ್ಲಾಪುರ ಗ್ರಾಮದ ಕಿರಣ್(27) ಎಂದು ಗುರುತಿಸಲಾಗಿದೆ.
ತಿಪಟೂರು ಕಲ್ಪತರು ಇಂಜಿನಿಯರಿಂಗ್ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದ ಯುವಕ ಕಿರಣ್ ಮಂಗಳವಾರ ಮಧ್ಯಾಹ್ನ ಕಡೂರು ರೈಲು ನಿಲ್ದಾಣದಿಂದ ಅರಸೀಕೆರೆ ಮಾರ್ಗದಲ್ಲಿರುವ ಬಳ್ಳೇಕೆರೆ ಗ್ರಾಮದ ಸಮೀಪದ ರೈಲ್ವೆ ಹಳಿಯಲ್ಲಿ ರೈಲಿಗೆ ಸಿಲುಕಿ ಸಾವಪ್ಪಿದ್ದಾನೆ.
ಯುವಕ ಕಿರಣ್ ಆತ್ಮಹತ್ಯೆ ಮಾಡಿಕೊಂಡಿದ್ದಾನೆಂದು ಪೊಲೀಸರು ಶಂಕಿಸಿದ್ದು, ಆತ್ಮಹತ್ಯೆಗೆ ಕಾರಣ ತಿಳಿದುಬಂದಿಲ್ಲ. ಬೀರೂರು ರೈಲ್ವೆ ಪೊಲಿಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.