ಚಿಕ್ಕಮಗಳೂರು | ನನ್ನ ಜಮೀನು ಅರಣ್ಯ ಒತ್ತುವರಿಯಾಗಿದ್ದರೆ ಅಧಿಕಾರಿಗಳು ತೆರವುಗೊಳಿಸಲಿ : ಕೆ.ಜೆ.ಜಾರ್ಜ್

Update: 2024-08-15 08:38 GMT

ಚಿಕ್ಕಮಗಳೂರು : ಜಿಲ್ಲೆಯಲ್ಲಿ ನಾನು ಯಾವುದೇ ಕಂದಾಯ, ಅರಣ್ಯ ಭೂಮಿ ಒತ್ತುವರಿ ಮಾಡಿ ಕಾಫಿ ತೋಟ ಮಾಡಿಲ್ಲ. ಚಿಕ್ಕಮಗಳೂರಿನಲ್ಲಿ ನಾನು ತೋಟವನ್ನು ಖರೀದಿ ಮಾಡಿದ್ದೇನೆ. ನಾನು ಒತ್ತುವರಿ ಮಾಡಿದ್ದರೆ ಸಂಬಂಧಿಸಿದ ಇಲಾಖೆಗಳ ಅಧಿಕಾರಿಗಳು ಜಂಟಿ ಸರ್ವೆ ನಡೆಸಿ ಒತ್ತುವರಿ ತೆರವು ಮಾಡಲಿ ಎಂದು ಉಸ್ತುವಾರಿ ಸಚಿವ ಜಾರ್ಜ್ ಹೇಳಿದ್ದಾರೆ.

ಗುರುವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಚಿಕ್ಕಮಗಳೂರು ತಾಲೂಕಿನಲ್ಲಿ ನನ್ನ‌ ಕಾಫಿ ಎಸ್ಟೇಟ್ ಇದೆ. ಅದನ್ನು ನಾನು ಖರೀದಿ ಮಾಡಿದ ಸಂದರ್ಭದಲ್ಲಿ ಅರಣ್ಯ ಒತ್ತುವರಿ ತೆರವಾಗಿದೆ. ಈಗಲೂ ನನ್ನ ಕಂಪೆನಿ ಎಸ್ಟೇಟ್‌ನಲ್ಲಿ  200 ಎಕರೆ ಒತ್ತುವರಿ ಇದೆ ಎಂದು ಕೆಲವರು ಆರೋಪಿಸುತ್ತಿದ್ದಾರೆ. ಅರಣ್ಯ ಒತ್ತುವರಿ ನಾನು ಮಾಡಿದ್ದಾರೆ ತೆರವು ಮಾಡಲು ನನ್ನ ಯಾವುದೇ ಅಭ್ಯಂತರವಿಲ್ಲ. ಅರಣ್ಯ, ಕಂದಾಯ ಇಲಾಖೆ ಅಧಿಕಾರಿಗಳು ಜಂಟಿ ಸರ್ವೆ ನಡೆಸಲಿ, ಒತ್ತುವರಿ ಇರುವುದು ನಿಜವಾಗಿದ್ದರೆ, ಅರಣ್ಯ ಜಾಗ ಒತ್ತುವರಿ ತೆರವು ಮಾಡಲು ಅಧಿಕಾರಿಗಳು ಮುಂದಾಗಲಿ ಎಂದು ಅವರು ಸ್ಪಷ್ಟನೆ ನೀಡಿದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News