ಕುದುರೆಗುಂಡಿ: ರಾಜ್ಯ ಎಸ್ಸೆಸ್ಸೆಫ್ 50ನೇ ವರ್ಷದ ಸಂಭ್ರಮ ಪ್ರಯುಕ್ತ ಪೀಪಲ್ ಕಾನ್ಫರೆನ್ಸ್

Update: 2023-08-20 10:00 GMT

ಚಿಕ್ಕಮಗಳೂರು, ಆ.20: ಕರ್ನಾಟಕ ರಾಜ್ಯ ಎಸ್ಸೆಸ್ಸೆಫ್ ತನ್ನ ಐವತ್ತನೇ ವರ್ಷದ ಸಂಭ್ರಮಾಚರಣೆಯನ್ನು 'ನಾವು ಭಾರತೀಯರು' ಎಂಬ ಧ್ಯೇಯದೊಂದಿಗೆ ಸೆಪ್ಟೆಂಬರ್ 10ರಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ ಹಮ್ಮಿಕೊಂಡಿದೆ. ಈ ಕಾರ್ಯಕ್ರಮದ ಪ್ರಚಾರಾರ್ಥ ಕುದುರೆಗುಂಡಿ ಪಟ್ಟಣದಲ್ಲಿ ಎಸ್ಸೆಸ್ಸೆಫ್ ಕುದುರೆಗುಂಡಿ ಯೂನಿಟ್ ಮಟ್ಟದ ಪೀಪಲ್ ಕಾನ್ಫರೆನ್ಸ್ ಇತ್ತೀಚೆಗೆ ಜರುಗಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಸ್ಸೆಸ್ಸೆಫ್ ಕುದುರೆಗುಂಡಿ ಯೂನಿಟ್ ಅಧ್ಯಕ್ಷ ಶರೀಫ್ ವಹಿಸಿದ್ದರು.

ಎಸ್ಸೆಸ್ಸೆಫ್ ಕರ್ನಾಟಕ ರಾಜ್ಯ ನಿಕಟಪೂರ್ವ ಸದಸ್ಯ ಸಫ್ವಾನ್ ಸಖಾಫಿ ಶಾಂತಿಪುರ ಮಾತನಾಡಿ, ನಾವೆಲ್ಲರೂ ಭಾರತೀಯರು ಎಂಬ ಧ್ಯೇಯವು ದೇಶಾದ್ಯಂತ ಮೊಳಗಲಿ ಎಂದರು.

ಸರಕಾರಿ ನೌಕರರು ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗೆ ಸೇರ್ಪಡೆಗೊಳಿಸಬೇಕು. ಸಂವಿಧಾನದ ಆಶಯವನ್ನು ಸಂವಿಧಾನದ ಪೀಠಿಕೆಯ ಮಹತ್ವವನ್ನು ದೇಶ ಮೂಲೆ ಮೂಲೆಗಳಲ್ಲಿ ಪಸರಿಸುವುದು ಹಾಗೂ ಗಾಂಜಾ, ಮದ್ಯಮುಕ್ತ ಭಾರತವನ್ನಾಗಿಸುವುದೇ ಎಸ್ಸೆಸ್ಸೆಫ್ ನ ಮುಖ್ಯ ಆಶಯವೆಂದು ತಿಳಿಸಿದರು.

ಬಿಂತ್ರವಳ್ಳಿ ಗ್ರಾಪಂ ಸದಸ್ಯ ಹೇಮಂತ್ ಕುಮಾರ್ ಮಾತನಾಡಿ, ಎಸ್ಸೆಸ್ಸೆಫ್ ಬಹಳಷ್ಟು ಸಮಾಜಮುಖಿ ಕೆಲಸ ಕಾರ್ಯಗಳನ್ನು ನಮ್ಮ ಪಟ್ಟಣದಲ್ಲಿ ನಡೆಸಿಕೊಂಡು ಬಂದಿದೆ. ಸಮಿತಿಯವರಿಗೆ ಈ ಸಂದರ್ಭ ಶುಭ ಹಾರೈಸುವುದಾಗಿ ಹೇಳಿದರು.

ಕುದುರೆಗುಂಡಿ ಸರಕಾರಿ ಪ್ರೌಢಶಾಲೆಯ ಆಡಳಿತ ಸಮಿತಿ ಅಧ್ಯಕ್ಷ ಪ್ರವೀಣ್ ಶೆಟ್ಟಿ ಮಾತನಾಡಿ ಶುಭ ಹಾರೈಸಿದರು.

ಇದೇವೇಳೆ ಊರಿನ ಹಿರಿಯ ಮುಖಂಡರ ಮೂಲಕ ಊರಿನ ಯುವಕರ ಕೈ ಚಳಕದಿಂದ ಮೂಡಿ ಬಂದ ಎಸ್ಸೆಸ್ಸೆಫ್ ಗೋಲ್ಡನ್ ಫಿಫ್ಟಿ ಲಾಂಛನವನ್ನು ಬಿಡುಗಡೆಗೊಳಿಸಲಾಯಿತು.

ಕಾರ್ಯಕ್ರಮದಲ್ಲಿ ಕುದುರೆಗುಂಡಿ ಬದ್ರಿಯ ಜುಮಾ ಮಸೀದಿಯ ಅಧ್ಯಕ್ಷ ಫಕೀರಬ್ಬ, ಕುದುರೆಗುಂಡಿ ಸುನ್ನೀ ಯುವಜನ ಸಂಘ ಅಧ್ಯಕ್ಷ ಅಬೂಬಕರ್, SYS ಚಿಕ್ಕಮಗಳೂರು ಜಿಲ್ಲಾ ಕಾರ್ಯದರ್ಶಿ ಶರೀಫ್, ಊರಿನ ಮುಖಂಡ ನಾಗೇಶ್ ನಾಯ್ಕ್, ಹಿರಿಯರಾದ ಅಹ್ಮದ್ ಬಾಷ, ಅಬ್ದುರ್ರಹ್ಮಾನ್, ರಜಬ್, ಮೂಸಬ್ಬ, ಕೆ.ಎಸ್.ಮುಹಮ್ಮದ್, ಎಸ್ಸೆಸ್ಸೆಫ್ ಚಿಕ್ಕಮಗಳೂರು ಜಿಲ್ಲೆ ಕೋಶಾಧಿಕಾರಿ ಶಮೀಮ್, ಎಸ್ಸೆಸ್ಸೆಫ್ ಚಿಕ್ಕಮಗಳೂರು ಜಿಲ್ಲಾ ಕಾರ್ಯದರ್ಶಿ ಸಲೀಮ್ ಹಾಗೂ ಎಸ್ಸೆಸ್ಸೆಫ್ ಕುದುರೆಗುಂಡಿ ಯೂನಿಟ್ ಕಾರ್ಯಕರ್ತರು ಭಾಗವಹಿಸಿದ್ದರು.

ಶರ್ಫುದ್ದೀನ್ ಸ್ವಾಗತಿಸಿದರು. ಎಸ್ಸೆಸ್ಸೆಫ್ ಕುದುರೆಗುಂಡಿ ಯೂನಿಟ್ ಪ್ರಧಾನ ಕಾರ್ಯದರ್ಶಿ ರಮೀಝ್ ವಂದಿಸಿದರು.

 

 

 

Tags:    

Writer - ವಾರ್ತಾಭಾರತಿ

contributor

Editor - Haneef

contributor

Byline - ವಾರ್ತಾಭಾರತಿ

contributor

Similar News