ಮಂಗಳೂರು| ವ್ಯಕ್ತಿಗೆ ಬೆದರಿಸಿ 30 ಲಕ್ಷ ರೂ. ವಂಚನೆ: ಪ್ರಕರಣ ದಾಖಲು

Update: 2024-11-07 19:09 GMT

ಮಂಗಳೂರು, ನ.7: ಅಪರಿಚಿತನೊಬ್ಬ ಕರೆ ಮಾಡಿ ಹಣದ ವ್ಯವಹಾರ ನೆಪದಲ್ಲಿ ವ್ಯಕ್ತಿಯೊಬ್ಬರಿಗೆ ಬೆದರಿಕೆ ಹಾಕಿ ಅವರಿಗೆ 30 ಲಕ್ಷ ರೂ. ವಂಚನೆಗೈದಿರುವ ಬಗ್ಗೆ ಸೆನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪಿರ್ಯಾದಿದಾರರಲ್ಲಿ ಅ.19ರಂದು ಅಪಚಿತನೊಬ್ಬ ಕರೆ ಮಾಡಿ ‘ನಿಮ್ಮ ಮೊಬೈಲ್ ನಂಬರ್‌ನಲ್ಲಿ ಆನ್‌ಲೈನ್ ವಂಚನೆ ಪ್ರಕರಣ ದಾಖಲಾಗಿದ್ದು, ಛತ್ರಪತಿ ಶಿವಾಜಿ ವಿಮಾನ ನಿಲ್ದಾಣದಲ್ಲಿ ಪ್ರಕರಣ ದಾಖಲಾಗಿದೆ. ಮುಂಬಯಿ ಸಹರಾ ಠಾಣೆಯಿಂದ ಕರೆ ಮಾಡಿರುವುದಾಗಿ ತಿಳಿಸಿದ್ದಾನೆ.

ಅ.19ರಂದು ಬೆಳಗ್ಗೆ 11ಗಂಟೆಗೆ ವಂಚನೆಗೊಳಗಾದ ವ್ಯಕ್ತಿಗೆ ಮೊಬೈಲ್‌ಗೆ ಪೊಲೀಸ್ ಸಮವಸ್ತ್ರ ಧರಿಸಿದ್ದ ಇನ್ನೊಬ್ಬ ವ್ಯಕ್ತಿ ವಿಡಿಯೊ ಕಾಲ್ ಮಾಡಿ ‘ಎಸ್‌ಬಿಐ ಬ್ಯಾಂಕ್ ಮುಂಬೈನಲ್ಲಿ ವಿವೇಕ್‌ದಾಸ್ ವ್ಯಕ್ತಿ ಅಕೌಂಟ್ ಓಪನ್ ಮಾಡಿ ಮಾನವ ಕಳ್ಳ ಸಾಗಾಣಿಕೆ ಅವ್ಯವಹಾರಗಳನ್ನು ಮಾಡಿದ್ದು, 3.9ಕೋಟಿ ರೂ. ವಂಚನೆ ಮಾಡಿದ್ದಾನೆ. ಈತನ ವಿಚಾರಣೆ ವೇಳೆ ಅವ್ಯವಹಾರ ಹಣದಲ್ಲಿ 38ಲಕ್ಷ ರೂ. ಕಮಿಷನ್ ನಿಮಗೆ ನೀಡಿರುತ್ತಾರೆ’ ಎಂದು ಆರೋಪಿಸಿದ್ದಾನೆ. ಇದಕ್ಕೆ ಒಪ್ಪದಿದ್ದಾಗ ನಿಮ್ಮ ಎಲ್ಲ ಖಾತೆಗಳನ್ನು ಸ್ಥಗಿತಗೊಳಿಸುವುದಾಗಿ ಹೇಳಿದ್ದಾನೆ ಮಾತ್ರವಲ್ಲದೆ ಬಂಧನ ವಾರಂಟ್ ಇರುವುದಾಗಿ ಹೇಳಿದ್ದಾನೆ. ಇದರಿಂದ ಗಾಬರಿಗೊಂಡ ತಾನು ಹಂತಹಂತವಾಗಿ 30,65,000ರೂ. ಹಣವನ್ನು ವರ್ಗಾವಣೆ ಮಾಡಿರುವುದಾಗಿ ಪೊಲೀಸರಿಗೆ ನೀಡಿರುವ ದೂರಿನಲ್ಲಿ ಮಾಹಿತಿ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News