ಧರ್ಮಸ್ಥಳ: ತೋಟಕ್ಕೆ ನುಗ್ಗಿದ ಕಾಡಾನೆ; ಕೃಷಿ ಹಾನಿ

Update: 2024-01-10 09:36 GMT

ಬೆಳ್ತಂಗಡಿ: ಒಂಟಿಸಲಗವೊಂದು ಕೃಷಿ ಭೂಮಿಗೆ ನುಗ್ಗಿ ಕೃಷಿಗೆ ಹಾನಿಯುಂಟುಮಾಡಿದ ಘಟನೆ ಧರ್ಮಸ್ಥಳ ಗ್ರಾಮದ ಮುಳಿಕಾರಿನಲ್ಲಿ ಬುಧವಾರ ನಡೆದಿದೆ.

ಬುಧವಾರ ಬೆಳಗ್ಗಿನ ಜಾವ ಮುಳಿಕಾರು ನಿವಾಸಿ ಡೀಕಯ್ಯ ಮಲೆಕುಡಿಯ ಎಂಬವರ ತೋಟಕ್ಕೆ ನುಗ್ಗಿ ಒಂದು ದೊಡ್ಡ ತೆಂಗಿನ ಮರವನ್ನು ನೆಲಕ್ಕುರುಳಿಸಿ ಪುಡಿಗೈದ ಕಾಡಾನೆ, ಅಡಿಕೆ, ಬಾಳೆ ಗಿಡಗಳಿಗೂ ಹಾನಿಯುಂಟುಮಾಡಿದೆ.

ಕಳೆದ ಕೆಲದಿನಗಳಿಂದ ಕಾಡಾನೆಯೊಂದು ಇದೇ ಪರಿಸರದ ಅರಣ್ಯದಲ್ಲಿ ತಿರುಗಾಟ ನಡೆಸುತ್ತಿತ್ತು ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ. ಮುಳಿಕಾರಿನ ಅರಣ್ಯದಲ್ಲಿಯೇ ತಿರುಗಾಡುತ್ತಿರುವ ಆನೆ ರಾತ್ರಿ ಮತ್ತೆ ಕೃಷಿ ಭೂಮಿಗೆ ನುಗ್ಗುವ ಅಪಾಯವಿದ್ದು ಸ್ಥಳೀಯರಲ್ಲಿ ಆತಂಕ ಹೆಚ್ಚಿಸಿದೆ.

ಕಳೆದ ಕೆಲದಿನಗಳಿಂದ ಈ ಪರಿಸರದಲ್ಲಿ ಕಾಡಾನೆಗಳ ಉಪಟಳ ಒಂದಿಷ್ಟು ಕಡಿಮೆಯಾಗಿತ್ತು. ಇದೀಗ ಮತ್ತೆ ಒಂಟಿಸಲಗ ತಿರುಗಾಟ ಆರಂಭಿಸಿದೆ.

ಕಾಡಾನೆಯನ್ನು ಅರಣ್ಯಕ್ಕೆ ಅಟ್ಟಲು ಕ್ರಮ ಕೈಗೊಳ್ಳುವಂತೆ ಸ್ಥಳೀಯ ಜನರು ಅರಣ್ಯ ಇಲಾಖೆಯ ಅಧಿಕಾರಿಗಳನ್ನು ಒತ್ತಾಯಿಸಿದ್ದಾರೆ.




 


Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News