ಮಂಗಳೂರು| ʼಡಿ.ಕೆ.ಎಸ್.ಸಿ ವಿಝನ್ 30 & ಬಿಯೋಂಡ್ʼ ಅನುಷ್ಠಾನಕ್ಕಾಗಿ ನೂತನ ಸಮಿತಿ ರಚನೆ

Update: 2024-07-15 04:17 GMT

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ವಿವಿಧ ಕ್ಷೇತ್ರಗಳ ಆಹ್ವಾನಿತ ನಾಯಕರ ವಿಶೇಷ ಕೂಟವು ದಕ್ಷಿಣ ಕರ್ನಾಟಕ ಸುನ್ನಿ ಸೆಂಟರ್(ರಿ) ಇದರ ಅಧ್ಯಕ್ಷರಾದ ಅಸ್ಸಯ್ಯಿದ್ ಕೆ.ಎಸ್.ಆಟಕ್ಕೋಯ ತಂಙಳ್ ಕುಂಬೋಲ್‍ ನೇತೃತ್ವದಲ್ಲಿ ಮಂಗಳೂರಿನ ಓಶಿಯನ್ ಪರ್ಲ್ ಹೊಟೇಲ್‍ನಲ್ಲಿ ಶನಿವಾರ ನಡೆಯಿತು.

ವೇದಿಕೆಯಲ್ಲಿ ಕರ್ನಾಟಕ ವಿಧಾನ ಸಭಾಧ್ಯಕ್ಷರಾದ ಯು.ಟಿ.ಖಾದರ್, ಕಣಚೂರು ಮೆಡಿಕಲ್ ಕಾಲೇಜಿನ ಅಧ್ಯಕ್ಷ ಡಾ. ಮೋನು ಹಾಜಿ ಕಣಚೂರು, ಎಸ್.ಎಂ.ಆರ್ ಗ್ರೂಪ್‍ನ ಅಧ್ಯಕ್ಷ ಡಾ.ಎಸ್.ಎಂ.ರಶೀದ್ ಹಾಜಿ, ಅಲ್ ಮುಝೈನ್ ಸಮೂಹ ಸಂಸ್ಥೆಗಳ ಅಧ್ಯಕ್ಷ ಅಲ್ ಹಾಜಿ ಝಕರಿಯಾ ಜೋಕಟ್ಟೆ ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಡಿ.ಕೆ.ಎಸ್.ಸಿ. ವಿಝನ್ 30 & ಬಿಯೋಂಡ್ ಯೋಜನೆಯ ವೀಡಿಯೋ ಚಿತ್ರ ಪ್ರದರ್ಶನಕ್ಕೆ ಯು.ಟಿ.ಖಾದರ್ ಚಾಲನೆ ನೀಡಿದರು. ಸದರಿ ಯೋಜನೆ ವಿಝನ್ 30 & ಬಿಯೋಂಡ್ ಇದರ ಅನುಷ್ಠಾನಕ್ಕಾಗಿ ಸ್ಥಳೀಯ ಮಟ್ಟದ ಸಮಿತಿಯೊಂದನ್ನು ರಚಿಸಲಾಯಿತು.

ಸಮಿತಿಯ ಗೌರವಾಧ್ಯಕ್ಷರಾಗಿ ಅಸ್ಸಯ್ಯಿದ್ ಕೆ.ಎಸ್.ಆಟಕ್ಕೋಯ ತಂಙಳ್ ಕುಂಬೋಲ್, ಗೌರವ ಉಪಾಧ್ಯಕ್ಷರಾಗಿ ಕರ್ನಾಟಕ ವಿಧಾನ ಸಭಾಧ್ಯಕ್ಷರಾದ ಯು.ಟಿ ಖಾದರ್, ಅಧ್ಯಕ್ಷರಾಗಿ ಝಕರಿಯಾ ಹಾಜಿ ಜೋಕಟ್ಟೆ, ಕಾರ್ಯಾಧ್ಯಕ್ಷರಾಗಿ ಹಾಜಿ ಬಿ.ಎಂ. ಮುಮ್ತಾಜ್ ಅಲಿ ಕೃಷ್ಣಾಪುರ, ಉಪಾಧ್ಯಕ್ಷರುಗಳಾಗಿ ಅಲ್ ಹಾಜ್ ಯು.ಕೆ.ಮೋನು ಕಣಚೂರು, ಡಾ. ಇಫ್ತಿಕಾರ್ ಅಲಿ, ಮುಹಮ್ಮದ್ ಅಮೀನ್ ಹೆಚ್.ಹೆಚ್, ಆಸಿಫ್ ಸೂಫಿ ಖಾನ್ ಹೋಂಪ್ಲಸ್, ಪ್ರಧಾನ ಕಾರ್ಯದರ್ಶಿಯಾಗಿ ರಫೀಕ್ ಮಾಸ್ಟರ್ ಮಂಗಳೂರು, ಕೋಶಾಧಿಕಾರಿಯಾಗಿ ಡಾ. ಎಸ್.ಎಂ. ರಶೀದ್ ಹಾಜಿ, ಜೊತೆ ಕೋಶಾಧಿಕಾರಿಯಾಗಿ ಶಾಕಿರ್ ಹಾಜಿ ಹೈಸಮ್, ಜೊತೆ ಕಾರ್ಯದರ್ಶಿಯಾಗಿ ಬಿ.ಎ. ನಝೀರ್, ಸಲಹಾ ಸಮಿತಿಯ ಮುಖ್ಯ ಸಲಹೆಗಾರರಾಗಿ ಬಿ.ಎಂ.ಫಾರೂಕ್, ಸಲಹೆಗಾರರುಗಳಾಗಿ ಶರೀಫ್ ಹಾಜಿ ವೈಟ್‍ಸ್ಟೋನ್, ಅಬ್ದುಲ್ ನಾಸಿರ್ ಲಕ್ಕಿ ಸ್ಟಾರ್, ಕೆ.ಮುಹಮ್ಮದ್ ಹಾರಿಸ್ ಮುಕ್ಕ ಸೀ ಫುಡ್, ಮಾಜಿ ಮೇಯರ್ ಕೆ.ಅಶ್ರಫ್, ಗೋಲ್ಡನ್ ಶರೀಫ್ ಮರವೂರು, ಮುಸ್ತಫ ಭಾರತ್ ಕನ್‍ಸ್ಟ್ರಕ್ಷನ್, ಸಾಲಿಹ್ ತಂಙಳ್, ಇಬ್ರಾಹಿಂ ಗಡಿಯಾರ್, ಅಸ್ಗರ್ ಅಲಿ ಡೆಕ್ಕನ್ ಮುಂತಾದವರನ್ನು ಆಯ್ಕೆ ಮಾಡಲಾಯಿತು.

ಈ ಸಂದರ್ಭದಲ್ಲಿ ಪವಿತ್ರ ಹಜ್ ಮುಗಿಸಿ ಊರಿಗೆ ಮರಳಿದ ಅಲ್ ಮುಝೈನ್ ಕಂಪೆನಿಯ ಮಾಲಕರಾದ ಅಲ್ ಹಾಜ್ ಝಕರಿಯಾ ಜೋಕಟ್ಟೆ ಹಾಗೂ ‌ʼಇಬ್ನು ಬತೂತʼ ಪ್ರಶಸ್ತಿಗೆ ಆಯ್ಕೆಯಾದ ಇಬ್ರಾಹಿಂ ಗಡಿಯಾರ್ ಇವರನ್ನು ಸನ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ ಕೇಂದ್ರ ಸಮಿತಿಯ ಸಲಹೆಗಾರರಾದ ಅಬ್ದುಲ್ ಹಮೀದ್ ಅರಮೆಕ್ಸ್ ಕಿರಾಅತ್ ಪಠಿಸಿದರು. ಅಲ್ ಇಹ್ಸಾನ್ ಸಮೂಹ ಶಿಕ್ಷಣ ಸಂಸ್ಥೆಯ ಪ್ರಾಂಶುಪಾಲರಾದ ಹಬೀಬ್ ರಹ್ಮಾನ್‍ರವರು ಡಿ.ಕೆ.ಎಸ್.ಸಿ.ಯ ಅಧೀನದಲ್ಲಿರುವ ಶಿಕ್ಷಣ ಸಂಸ್ಥೆಗಳ ಬಗ್ಗೆ ಪರಿಚಯಿಸಿದರು. ಡಿ.ಕೆ.ಎಸ್.ಸಿ ಕೇಂದ್ರ ಸಮಿತಿಯ ಸಂವಹನ ಕಾರ್ಯದರ್ಶಿ ಕೆ.ಚ್.ರಫೀಕ್ ಸೂರಿಂಜೆ ಧನ್ಯವಾದಗೈದರು. ಡಿ.ಕೆ.ಎಸ್.ಸಿ ಅಕಾಡೆಮಿ ಬೋರ್ಡ್ ಸದಸ್ಯರಾದ ರಫೀಕ್ ಮಾಸ್ಟರ್ ಕಾರ್ಯಕ್ರಮ ನಿರೂಪಿಸಿದರು. ಡಿ.ಕೆ.ಎಸ್.ಸಿ. ಕೇಂದ್ರ ಸಮಿತಿಯ ಸಂಚಾಲಕರಾದ ಅಬ್ದುಲ್ ಅಝೀಝ್ ಮೂಳೂರು ಹಾಗೂ ಡಿ.ಕೆ.ಎಸ್.ಸಿ ಜುಬೈಲ್ ಯೂತ್‍ವಿಂಗ್ ಪ್ರಧಾನ ಕಾರ್ಯದರ್ಶಿ ಇಂಜಿನಿಯರ್ ಶಫೀರ್ ಗೂಡಿನ ಬಳಿ ಕಾರ್ಯಕ್ರಮದಲ್ಲಿ ಸಹಕರಿಸಿದರು.

 



 


 

 

 

 

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News