ಹಂಪನಕಟ್ಟೆ: ‘ಎಸ್ 4 ಬಿ’ ಸಿದ್ಧ ಉಡುಪುಗಳ ಮಳಿಗೆ ಆರಂಭ
ಮಂಗಳೂರು, ಅ.29: ನಗರದ ಹಂಪನಕಟ್ಟೆಯಲ್ಲಿ ‘ಎಸ್ 4 ಬಿ’ ಸಿದ್ಧ ಉಡುಪುಗಳ ಮಳಿಗೆ ಮಂಗಳವಾರ ಶುಭಾರಂಭಗೊಂಡಿದೆ.
ಗೋವಾ, ಮೈಸೂರು ಹಾಗೂ ಭಟ್ಕಳದಲ್ಲಿ ಈಗಾಗಲೇ ಯಶಸ್ವಿಯಾಗಿರುವ ‘ಎಸ್ 4 ಬಿ’ ಸಂಸ್ಥೆಯು ಮಂಗಳೂರಿನ ಹಂಪನಕಟ್ಟೆಯಲ್ಲಿ ನೂತನವಾಗಿ ಸಿದ್ಧ ಉಡುಪುಗಳ ಮಳಿಗೆಯನ್ನು ಆರಂಭಿಸಿದೆ.
ಪುರುಷರ, ಮಹಿಳೆಯರ ಮತ್ತು ಮಕ್ಕಳ ವಿಭಾಗದಲ್ಲಿ ಎಲ್ಲ ವಯಸ್ಸಿನ ಮಕ್ಕಳ ನವೀನ ಮಾದರಿಯ ಎಲ್ಲ ವಿಧದ ಸಿದ್ಧ ಉಡುಪುಗಳು ಇಲ್ಲಿ ಆಕರ್ಷಕ ಬೆಲೆಗೆ ಲಭ್ಯವಿದೆ.
ವಿವಿಧ ಬ್ರ್ಯಾಂಡ್‌ಗಳ, ವೆಸ್ಟರ್ನ್, ಪ್ಯಾಂಟ್, ಶರ್ಟ್, ಚೂಡಿದಾರ್, ಕುರ್ತಾ, ಲೆಗ್ಗಿಂಗ್ಸ್, ಲೇಡಿಸ್ ಟಾಪ್ ಸೇರಿದಂತೆ ಅಗತ್ಯದ ಸಿದ್ಧ ಉಡುಪುಗಳು ದೊರೆಯಲಿದೆ. ಗ್ರಾಹಕರ ಮನಮೆಚ್ಚುವ ಸಿದ್ಧ ಉಡುಪುಗಳ ಆಯ್ಕೆಗೆ ಇಲ್ಲಿ ವಿಫುಲ ಅವಕಾಶವಿದೆ ಎಂದು ಸಂಸ್ಥೆಯ ಪಾಲುದಾರರಾದ ಮುಹಮ್ಮದ್ ಹಂಝ ತಿಳಿಸಿದ್ದಾರೆ.
ಗೋವಾದ ಮುಹಮ್ಮದ್ ಹಂಝ, ಮುಹಮ್ಮದ್ ಮೀರಾ, ಮೌಝಮ್ ಅಲಿ ಮತ್ತು ತುಫೈಲ್ ಅಹ್ಮದ್ ಸೇರಿದಂತೆ ನಾಲ್ವರು ಸಹೋದರರ ನೇತೃತ್ವದಲ್ಲಿ ‘ಎಸ್ 4 ಬಿ’ ಸಿದ್ಧ ಉಡುಪುಗಳ ಮಳಿಗೆಗಳು ಗೋವಾ , ಮೈಸೂರು ಮತ್ತು ಭಟ್ಕಳದಲ್ಲಿ ಯಶಸ್ವಿಯಾಗಿ ಮುನ್ನಡೆಯುತ್ತಿದೆ.
‘ಎಸ್ 4 ಬಿ’ ಸಿದ್ಧ ಉಡುಪುಗಳ ಮಳಿಗೆ ವೆನ್ಲಾಕ್ ಆಸ್ಪತ್ರೆಯ ಎದುರಿನ ಟೋಕಿಯೋ ಮಾರ್ಕೆಟ್ ಸಮೀಪದಲ್ಲಿದೆ.