ದ್ವೇಷ ಪ್ರಚಾರ ಉದ್ಯೋಗಾವಕಾಶಗಳನ್ನು ನಷ್ಟಪಡಿಸುತ್ತದೆ: ವಿಸ್ಡಮ್ ಯೂತ್, ಕೆ.ಎಸ್‌. ಎ

Update: 2023-08-07 10:54 GMT

ಮಂಗಳೂರು: ದ್ವೇಷ ಪ್ರಚಾರ ಮತ್ತು ನಿರಂತರ ಗಲಭೆಗಳ ಕಾರಣ ಬಹುರಾಷ್ಟ್ರೀಯ ಕಂಪನಿಗಳು ದೇಶದಲ್ಲಿ ಹೂಡಿಕೆ ಮಾಡಲು ಹಿಂಜರಿಯುತ್ತದೆ ಮತ್ತು ಅದರ ಮೂಲಕ ತುಂಬಾ ಉದ್ಯೋಗಾವಕಾಶಗಳು ನಷ್ಟವಾಗುತ್ತದೆ ಎಂದು ವಿಸ್ಡಮ್ ಯೂತ್ ಮತ್ತು ಕೆ. ಎಸ್. ಎ ಮಂಗಳೂರಿನಲ್ಲಿ ಆಯೋಜಿಸಿದ ಪ್ರೊಫೇಸ್ ಎನೌನ್ಸಿಂಗ್ ಕಾನ್ಫರೆನ್ಸ್ ಅಭಿಪ್ರಾಯ ವ್ಯಕ್ತಪಡಿಸಿದೆ.

ಉದ್ಯೋಗಾವಕಾಶಗಳು ಇಲ್ಲದ ಕಾರಣ ಪ್ರತಿಭಾನ್ವಿತ ಪ್ರೊಫೆಷನಲುಗಳಾದ ಯುವಕರು ವಿದೇಶ ರಾಷ್ಟ್ರಗಳಿಗೆ ಹೋಗಲು ನಿರ್ಬಂಧಿತರಾಗುತ್ತಾರೆ. ಆ ಮೂಲಕ ಮಾನವ ಸಂಪನ್ಮೂಲವನ್ನು ದೇಶಕ್ಕೆ ಬೇಕಾಗಿ ಪರಿಣಾಮಕಾರಿಯಾಗಿ ಉಪಯೋಗಿಸಲು ಸಾಧ್ಯವಾಗುವುದಿಲ್ಲ. ಇದು ಸರಕಾರದ ಆಡಳಿತ ವೈಫಲ್ಯವಾಗಿದೆ. ಮತೀಯ ದ್ವೇಷ ಮತ್ತು ಗಲಭೆಗಳನ್ನು ದೇಶದಿಂದ ನಿರ್ಮೂಲನೆ ಮಾಡಿ ಶಾಂತಿ ಪುನಸ್ಥಾಪಿಸಿದರೆ ಮಾತ್ರವೇ ಹೂಡಿಕೆ ಮತ್ತು ಉದ್ಯೋಗಾವಕಾಶಗಳು ಹೆಚ್ಚುವುದು.

ಪ್ರೊಫೆಷನಲುಗಳು ಸೇರಿದಂತೆ ಯುವಕರ ಚಿಂತನಾಶಕ್ತಿ ಮತ್ತು ಕ್ರಿಯಾತ್ಮಕ ಸಾಮರ್ಥಗಳನ್ನು ರಾಷ್ಟ್ರದ ಒಳಿತಿಗೆ ಬಳಕೆಯಾಗುವ ರೀತಿಯಲ್ಲಿ ಯೋಜನೆಗಳನ್ನು ಸಿದ್ಧಪಡಿಸಲು ಸಮ್ಮೇಳನ ಆಗ್ರಹಿಸಿತು.

ಕೋಮುವಾದ ಮತ್ತು ದ್ವೇಷ ಪ್ರಚಾರಗಳ ವಿರುದ್ಧ ಕರ್ನಾಟಕ ಸರ್ಕಾರದ ಚಟುವಟಿಕೆಗಳು ತುಂಬಾ ಶ್ಲಾಘನೀಯವಾಗಿದೆ, ಜಾತ್ಯತೀತ ತತ್ವವನ್ನು ಶಕ್ತಗೊಳಿಸಿ ಪ್ರಜಾಪ್ರಭುತ್ವವನ್ನು ಬಲಪಡಿಸುವಾಗ ದೇಶದಲ್ಲಿ ಶಾಂತಿ ಮತ್ತು ದೇಶದ ಪ್ರತಿಷ್ಠೆಯನ್ನು ಮರಳಿ ತರಲು ಸಾಧ್ಯವೆಂದು ಸಮ್ಮೇಳನ ಅಭಿಪ್ರಾಯ ವ್ಯಕ್ತಪಡಿಸಿತು.

ಕರ್ನಾಟಕ ವಿಧಾನಸಭೆ ಸ್ಪೀಕರ್ ಯು ಟಿ ಖಾದರ್ ಸಮ್ಮೇಳನ ಉದ್ಘಾಟಿಸಿದರು.

ವಿಸ್ಡಮ್ ಇಸ್ಲಾಮಿಕ್ ಆರ್ಗನೈಝೇಷನ್ ನ ಅಧ್ಯಕ್ಷರಾದ ಮೌಲವಿ ಪಿ.ಎನ್ ಅಬ್ದುಲ್ ಲತೀಫ್ ಮದನಿ ಪ್ರೊಫೇಸ್ ಫ್ಯಾಮಿಲಿ ಕಾನ್ಸರನ್ಸ್ ಘೋಷಣೆ ಮಾಡಿದರು.

ಪ್ರೊಫೇಸ್ ಫ್ಯಾಮಿಲಿ ಕಾನ್ಸ್‌ರನ್ಸ್ ನವೆಂಬರ್ 11, 12 ರಂದು ಎರ್ನಾಕುಳಂ ನಲ್ಲಿ ನಡೆಯಲಿದೆ. ವಿಸ್ಡಮ್ ಯೂತ್ ರಾಜ್ಯ ಕಾರ್ಯದರ್ಶಿಗಳಾದ ಜಂಶೀರ್ ಸ್ವಲಾಹಿ ಅಧ್ಯಕ್ಷತೆ ವಹಿಸಿದರು. ವಿಸ್ಮಮ್ ಯೂತ್ ಪ್ರಧಾನ ಕಾರ್ಯದರ್ಶಿ ಟಿ ಕೆ ನಿಶಾದ್ ಸಲಫಿ, ವಿಸ್ಡಮ್ ಯೂತ್ ಕೋಶಾಧಿಕಾರಿ ಅನ್ಫಾಸ್ ಮುಕ್ರಮ್, ಉಪಾಧ್ಯಕ್ಷ ಹಾರಿಸ್ ಕಾಯಕ್ಕೋಡಿ, ಡಾ. ಪಿ. ಪಿ ನಸೀಫ್, ಪ್ರೊಫೆಸರ್ ಜೌಹರ್ ಮುನವ್ವರ್, ಡಾ. ಮುಹಮ್ಮದ್ ಫಹೀಂ, ಪ್ರೊಫೆಷನಲ್ ವಿಂಗ್ ರಾಜ್ಯ ಕನ್ವೀನ‌ರ್ ಝಕರಿಯ ಪಾಂಡಿಕ್ಕಾಡ್‌, ಕರ್ನಾಟಕ ಸಲಫಿ ಎಸೋಸಿಯೇಷನ್ ಅಧ್ಯಕ್ಷ ಡಾ ಹಫೀಝ್ ಸ್ವಲಾಹಿ ಮತ್ತು ಪ್ರಧಾನ ಕಾರ್ಯದರ್ಶಿ ಯಾಸಿರ್ ಅಲ್ ಹಿಕಮಿ ಮಾತನಾಡಿದರು.

 

 

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News