ಉಳ್ಳಾಲ ವಲಯ ಮಟ್ಟದ ಕಬಡ್ಡಿ ಪಂದ್ಯಾಟ ಉದ್ಘಾಟನೆ

Update: 2023-09-02 10:18 GMT

ಕೊಣಾಜೆ: ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಶಾಲಾ ಶಿಕ್ಷಣ ಇಲಾಖೆ ಕ್ಷೇತ್ರ ಶಿಕ್ಷಣಾಧಿಕಾರಿಯವರ ಕಚೇರಿ ಮಂಗಳೂರು ದಕ್ಷಿಣ ವಲಯ ಹಾಗೂ ಜಮೀಯ್ಯತ್ತುಲ್ ಫಲಾಹ್ ಗ್ರೀನ್ ವೀವ್ ಪ್ರೌಢಶಾಲೆ , ಅಡ್ಕರೆಪಡ್ಪು ,ಕೊಣಾಜೆ ಇದರ ಸಹಯೋಗದಲ್ಲಿ ಉಳ್ಳಾಲ ವಲಯ ಮಟ್ಟದ ಪ್ರೌಢಶಾಲಾ ಬಾಲಕ ಬಾಲಕಿಯರ ಕಬಡ್ಡಿ ಪಂದ್ಯಾಟವು ಇತ್ತೀಚಿಗೆ ಗ್ರೀನ್ ವ್ಯೂ ಪ್ರೌಢಶಾಲಾ ಮೈದಾನದಲ್ಲಿ ಜರುಗಿತು.

ಪಂದ್ಯಾಟದ ಉದ್ಘಾಟನೆಯನ್ನು ಜಂ.ಫಲಾಹ್ ಎನ್.ಆರ್.ಸಿ.ಸಿ ರಿಯಾದ್ ಘಟಕದ ಅಧ್ಯಕ್ಷರಾದ ಮೊಹಮ್ಮದ್ ಅಶ್ಫಾಕ್ ನೇರವೇರಿಸಿ ಕ್ರೀಡೆಯಿಂದ ಅರೋಗ್ಯವನ್ನು ಸದೃಢ ಪಡೆಸಿಕೊಳ್ಳಲು ಸಾಧ್ಯವಿದೆ. ಹಾಗಾಗಿ ಪ್ರತಿಯೊಬ್ಬರೂ ಪ್ರತೀ ದಿನ ಕ್ರೀಡೆಯಲ್ಲಿ ತೊಡಗಿಸಿ ಕೊಳ್ಳುವುದು ಬಹಳ ಮುಖ್ಯ ಎಂದರು.

ಜಮೀಯ್ಯತ್ತುಲ್ ಫಲಾಹ್ ಅಧ್ಯಕ್ಷರಾದ ಹಾಜಿ ಶಾಹುಲ್ ಹಮೀದ್ .ಕೆ.ಕೆ ಅಧ್ಯಕ್ಷತೆಯನ್ನು ವಹಿಸಿದ್ದರು.

ಜಮೀಯ್ಯತ್ತುಲ್ ಫಲಾಹ್ ರಿಯಾದ್ ಘಟಕದ ಪದಾಧಿಕಾರಿಗಳಾದ ಜಿ.ಕೆ.ಶೇಖ್ ,ಮೊಹಮ್ಮದ್ ಹನೀಫ್, ಗ್ರೀನ್ ವೀವ್ ವಿದ್ಯಾಸಂಸ್ಥೆಯ ಸಂಚಾಲಕರಾದ ಪರ್ವೇಝ್ ಅಲಿ ,ಹಾಜಿ. ಇಬ್ರಾಹಿಂ ಕೋಡಿಜಾಲ್ ,ಮಂಗಳೂರು ತಾಲೂಕು ಘಟಕದ ಅಧ್ಯಕ್ಷರಾದ ಅಬ್ದುಲ್ ನಾಸಿರ್ ಕೆ.ಕೆ ,ಸದಸ್ಯರಾದ ಮುಹಮ್ಮದ್ ಬಪ್ಪಳಿಗೆ ,ಮಂಗಳೂರು ತಾಲೂಕು ದೈಹಿಕ ಶಿಕ್ಷಣಾಧಿಕಾರಿ ಶ್ರೀ ರವಿಶಂಕರ್,ಕೊಣಾಜೆ ಗ್ರಾಮ ಪಂಚಾಯತ್ ನ ಮಾಜಿ ಅಧ್ಯಕ್ಷರಾದ ಶ್ರೀಮತಿ ಚಂಚಲಾಕ್ಷಿ ,ಪಂಚಾಯತ್ ಸದಸ್ಯರಾದ ಶ್ರೀಮತಿ ಝೋಹಾರಾ ,ಶ್ರೀಮತಿ ಫೌಝಿಯ, ಜಿಲ್ಲಾ ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಕೋಶಾಧಿಕಾರಿ ತ್ಯಾಗಮ್ ಹರೇಕಳ,ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷರಾದ ಎ.ಬಿ.ಹಸೈನಾರ್ , ಉಪಾಧ್ಯಕ್ಷರಾದ ಮಾಲತಿ ,ಎಸ್.ಬಿ.ಸಿ ಮಾಜಿ ಅಧ್ಯಕ್ಷರಾದ ಅಬೂಬಕ್ಕರ್ ಮೊಹಮ್ಮದ್, ಮೊಹಿಯ್ಯುದ್ದೀನ್ ಜುಮಾ ಮಸ್ಜಿದ್ ಅಧ್ಯಕ್ಷರಾದ ಜಾಫರ್, ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ತಾಲೂಕು ಕಾರ್ಯದರ್ಶಿ ಮೋಹನ್ , ಪ್ರೌಢಶಾಲಾ ಮುಖ್ಯೋಪಾಧ್ಯಾಯಿನಿ ನಮಿತಾ .ಬಿ.ಎನ್ , ಪ್ರಾಂಶುಪಾಲರಾದ ಅಬೂಬಕ್ಕರ್ .ಕೆ , ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಾಯಿನಿ ಎವ್ಲಿನ್ .ಪಿ.ಐಮನ್ ಉಪಸ್ಥಿತರಿದ್ದರು.

ಅಬೂಬಕ್ಕರ್.ಕೆ ರವರು ಸ್ವಾಗತಿಸಿ , ತಿಪ್ಪೋಜಿ.ಎಂ.ವೈ ವಂದಿಸಿದರು. ಅಧ್ಯಾಪಕರಾದ ರಶ್ಮಿ.ಎಸ್. ಹಾಗೂ ಅಬ್ದುಲ್ ಸಲಾಂ ರವರು ಕಾರ್ಯಕ್ರಮ ನಿರೂಪಿಸಿದರು.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News