ಜ. 20ರಂದು ದೇರಳಕಟ್ಟೆಯಲ್ಲಿ ಜಾಗ್ವರ್ ಕ್ಲಾಸಿಕ್ 2024
ಉಳ್ಳಾಲ: ದೇರಳಕಟ್ಟೆಯ ಜಾಗ್ವರ್ ಫಿಟ್ನೆಸ್ ಸೆಂಟರ್ ನೇತೃತ್ವದಲ್ಲಿ ಕೇರಳ ಕರ್ನಾಟಕ ರಾಜ್ಯಗಳ ದೇಹದಾರ್ಢ್ಯ ಪಟುಗಳ ಫಿಟ್ನೆಸ್ ಸ್ಪರ್ಧೆ ʼಜ್ಯಾಗುವರ್ ಕ್ಲಾಸಿಕ್ 2024ʼ ಜ.20 ರಂದು ದೇರಳಕಟ್ಟೆಯಲ್ಲಿ ಜರಗಲಿದೆ ಎಂದು ಆಯೋಜಕ ನಾಸಿರ್ ಸಾಮಣಿಗೆ ಹೇಳಿದ್ದಾರೆ.
ಸುದ್ಧಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಥಮ ಬಾರಿಗೆ ದೇರಳಕಟ್ಟೆ ಜಂಕ್ಷನ್ನಿನಲ್ಲಿ ರಾಜಕೀಯ ರಹಿತ, ಜಾತಿಮತ ಬೇಧಭಾವವಿಲ್ಲದ ದೇಹದಾಢ್ಯ೯ ಸ್ಪರ್ಧೆಯನ್ನು ಆಯೋಜಿಸಲಾಗಿದ್ದು, ಉದ್ಘಾಟನೆಯನ್ನು ಯುಟಿ ಖಾದರ್ ನೆರವೇರಿಸಲಿ ದ್ದಾರೆ. ಉದ್ಘಾಟನಾ ಸಮಾರಂಭದಲ್ಲಿ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯದ ಸೆನೆಟ್ ಸದಸ್ಯ ಯು.ಟಿ ಇಫ್ತಿಕಾರ್, ಪುತ್ತೂರು ಶಾಸಕ ಅಶೋಕ್ ರೈ, ಕೆಪಿಸಿಸಿ ಪ್ರ.ಕಾ ಪದ್ಮರಾಜ್, ಮಿಥುನ್ ರೈ, ಪ್ರಶಾಂತ್ ಕಾಜವ, ಬಿಜೆಪಿ ಮುಖಂಡ ಬೋಳಿಯಾರ್ ಸಂತೋಷ್ ಕುಮಾರ್ ರೈ, ಅಬ್ದುಲ್ ಶಕೀಲ್,ನರಿಂಗಾನ ಗ್ರಾ.ಪಂ ಅಧ್ಯಕ್ಷ ನವಾಝ್, ಬೆಳ್ಮ ಗ್ರಾ.ಪಂ ಅಧ್ಯಕ್ಷೆ ರಝಿಯಾ, ಇಕ್ಬಾಲ್ , ಸಿ.ಎಂ ಸತ್ತಾರ್ , ಸಿ.ಎಂ ಫಾರುಕ್ ಸೇರಿದಂತೆ ಸ್ಥಳೀಯ ನಾಯಕರು ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.
ಮಿಸ್ಟರ್ ಏಷಿಯಾ ವಿಜೇತ ರಮೀಝ್ ಮಾತನಾಡಿ, ಹೈಟ್ ಕ್ಯಾಟಗರಿ ಜ್ಯೂನಿಯರ್ ಅಂಡರ್ 23, ಮೆನ್ಸ್ ಫಿಸಿಕ್, ಮೆನ್ಸ್ ಸ್ಪೋಟ್ಸ್೯ ಮಾಡೆಲ್, ಜೀನ್ಸ್ ಮಾಡೆಲ್, ಫಸ್ಟ್ ಟೈಮರ್ ಬಾಡಿ ಬಿಲ್ಡಿಂಗ್ ಮಾನದಂಡದಡಿ ಸ್ಪರ್ಧಾಳುಗಳಿಗೆ ನೋಂದಣಿಗೆ ಅವಕಾಶವಿದೆ. ರೂ. 1,50,000 ಪ್ರಶಸ್ತಿ ಮೊತ್ತ ವಿಜೇತರಿಗೆ ನೀಡಲಾಗುವುದು.
150 ಕ್ಕಿಂತ ಅಧಿಕ ಕ್ರೀಡಾಳುಗಳಿಗೆ ಅವಕಾಶವಿದ್ದು, ಕಾರ್ಯಕ್ರಮದಂದೇ ಬೆಳಗ್ಗಿನಿಂದ ಕೇರಳ ಹಾಗೂ ಕರ್ನಾಟಕ ರಾಜ್ಯಗಳ ಆಟಗಾರರಿಗೆ ನೋಂದಣಿಗೆ ಅವಕಾಶವಿದೆ ಎಂದರು.
ಮಿ.ಕರ್ನಾಟಕ ಪ್ರಶಸ್ತಿ ವಿಜೇತ ನವಾಝ್, ಆಯೋಜಕ ಸಿದ್ದೀಖ್, ಮಿಸ್ಟರ್ ಸೌತ್ ಇಂಡಿಯಾ ವಿಜೇತ ವಿನೋದ್ ಉಪಸ್ಥಿತರಿದ್ದರು.