ಜೆಪ್ಪು: ಸೈಂಟ್‌ ಜೋಸೆಫ್ ಸರ್ವಿಸ್ ಸ್ಟೇಷನ್‌ ನಲ್ಲಿ ಎಲೆಕ್ಟ್ರಿಕ್ ವೆಹಿಕಲ್ ಚಾರ್ಜಿಂಗ್ ಘಟಕಕ್ಕೆ ಚಾಲನೆ

Update: 2023-09-02 11:07 GMT

ಮಂಗಳೂರು, ಸೆ.2: ಸುಸ್ಥಿರ ಮತ್ತು ಪರಿಸರ ಸ್ನೇಹಿ ಸಾರಿಗೆಯನ್ನು ಉತ್ತೇಜಿಸುವ ನಿಟ್ಟಿನಲ್ಲಿ ನಗರದ ಜೆಪ್ಪು ಸೈಂಟ್‌ ಜೋಸೆಫ್ ಸರ್ವಿಸ್ ಸ್ಟೇಷನ್‌ ನಲ್ಲಿ ಬಿಪಿಸಿಎಲ್‌ ನ ವಲಯ ಮಟ್ಟದಮೊದಲ ಎಲೆಕ್ಟ್ರಿಕ್ ವೆಹಿಕಲ್ ಚಾರ್ಜಿಂಗ್ ಘಟಕಕ್ಕೆ ಬಿಪಿಸಿಎಲ್ ಟೆರಿಟರಿ ಮ್ಯಾನೇಜರ್ ಅಮೋಲ್ ಭೋಸ್ಲೆ ಚಾಲನೆ ನೀಡಿದರು.

ಕಾರ್ಯಕ್ರಮದಲ್ಲಿ ಮಾತನಾಡಿದ ಅಮೋಲ್ ಭೋಸ್ಲೆ , ವಿದ್ಯುತ್‌ಚಾಜಿರ್ಂಗ್ ಮಾರುಕಟ್ಟೆಯಲ್ಲಿ ಇಂಧನಕ್ಕೆ ಹೊಸ ಪರ್ಯಾಯವಾಗಿದೆ. ಯಾವುದೇ ದೇಶದಲ್ಲಿ ಇಂಧನದ ಭವಿಷ್ಯ ವಿದ್ಯುತ್‌ಚಾಜಿರ್ಂಗ್ ಮೇಲೆ ಅವಲಂಬಿತವಾಗಿದೆ. ವಿದ್ಯುತ್ ಚಾಜಿರ್ಂಗ್ ಕೇಂದ್ರವು ಸ್ವಚ್ಛ ಭಾರತಕ್ಕೆ ಕೊಡುಗೆ ನೀಡುತ್ತದೆ. ಸೇಂಟ್ ಜೋಸೆಫ್ ಸರ್ವಿಸ್ ಸ್ಟೇಷನ್ ಒಂದು ದಶಕದಿಂದ ಪೆಟ್ರೋಲಿಯಂ ತೈಲ ವಿತರಿಸುವ ವ್ಯವಹಾರದಲ್ಲಿದೆ. ಬಿಪಿಸಿಎಲ್‌ ನಿಂದ ಎಲೆಕ್ಟ್ರಿಕ್‌ ಚಾರ್ಜಿಂಗ್ ಸ್ಟೇಷನ್ ಮಂಗಳೂರಿನಲ್ಲಿ ಇದೇ ಮೊದಲನೆಯದಾಗಿ ಸೈಂಟ್‌ ಜೋಸೆಫ್‌ ಸರ್ವಿಸ್ ಸ್ಟೇಷನ್‌ ನಲ್ಲಿ ಲಭ್ಯವಾಗಿದೆ ಎಂದರು.

ಸಮಾರಂಭದಲ್ಲಿ ಆಶೀರ್ವದಿಸಿ ಮಾತನಾಡಿದ ಮಂಗಳೂರು ಧರ್ಮಕ್ಷೇತ್ರದ ಬಿಷಪ್‌ ಅತೀ ವಂ. ಡಾ. ಪೀಟರ್ ಪಾವ್ಲ್ ಸಲ್ಡಾನಾ ಅವರು, ಹವಾಮಾನ ಬದಲಾವಣೆಯು ನಮ್ಮ ಮೇಲೆ ವಿಪರೀತ ಪರಿಣಾಮವನ್ನು ಉಂಟುಮಾಡುತ್ತಿದೆ. ಶೂನ್ಯ ಹೊರ ಸೂಸುವಿಕೆಯನ್ನು ಸಾಧಿಸಲು, ಪರ್ಯಾಯ ಶಕ್ತಿಯಾದ ವಿದ್ಯುತ್ ಶಕ್ತಿಯನ್ನು ಬಳಸಲು ಇಲ್ಲಿ ಅವಕಾಶವಿದೆ ಎಂದು ಹೇಳಿದರು.

ಉದ್ಘಾಟನಾ ಸಮಾರಂಭದಲ್ಲಿ ಬಿಪಿಸಿಎಲ್‌ ನ ಟೆರಿಟರಿ ಇಂಜಿನಿಯರ್ ನೀರಜ್‌ಕುಮಾರ್, ಸೇಲ್ಸ್ ಮ್ಯಾನೇಜರ್ ಸೀತೇಶ್ ಚೌಧರಿ, ಫ್ಲೀಟ್‌ ಆಫೀಸರ್ ಬಾಲಾಜಿ ಮತ್ತು ಇನ್‌ ಸ್ಟಾಲೇಶನ್ ಮ್ಯಾನೇಜರ್ ನೀರಜ್‌ ಅಗರ್‌ವಾಲ್ ಸೇರಿದಂತೆ ಹಲವಾರು ಪ್ರಮುಖರು ಉಪಸ್ಥಿತರಿದ್ದರು.

ಸೈಂಟ್‌ ಜೋಸೆಫ್ ಸರ್ವೀಸ್ ಸೆಂಟರ್‌ ಬಿಪಿಸಿಎಲ್‌ ಪೆಟ್ರೋಲ್ ಪಂಪ್‌ ನ ಡೀಲರ್ ಮತ್ತು ಮ್ಯಾನೇಜಿಂಗ್ ಟ್ರಸ್ಟಿ ಆ್ಯಂಡ್ರು ಡಿಕೊಸ್ತಾ ಸ್ವಾಗತಿಸಿದರು. ವಿಲಿಯಂ ಮಿರಾಂದಾ ಕಾರ್ಯಕ್ರಮ ನಿರೂಪಿಸಿದರು.

 

 

 

 

 

 

 

 

 

 

 

 

 

 

 

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News