ವಾರದ ಹಿಂದೆ ಅಧಿಕಾರ ಸ್ವೀಕರಿಸಿದ್ದ ಮಂಗಳೂರು ವಿವಿ ನೂತನ ಕುಲಸಚಿವ ಮೊಹಮ್ಮದ್ ನಯೀಮ್ ಮೊಮಿನ್ ವರ್ಗಾವಣೆ

Update: 2023-08-01 16:31 GMT

ಫೈಲ್‌ ಫೋಟೊ 

ಮಂಗಳೂರು, ಆ.1: ಮಂಗಳೂರು ವಿಶ್ವವಿದ್ಯಾನಿಲಯದ ಆಡಳಿತ ವಿಭಾಗದ 17ನೇ ಕುಲಸಚಿವರಾಗಿ ವಾರದ ಹಿಂದೆ ಅಧಿಕಾರ ಸ್ವೀಕರಿಸಿದ್ದ ಕೆಎಎಸ್ ಹಿರಿಯ ಶ್ರೇಣಿಯ ಅಧಿಕಾರಿ ಮೊಹಮ್ಮದ್ ನಯೀಮ್ ಮೊಮಿನ್ ಅವರನ್ನು ಮತ್ತೆ ವರ್ಗಾಯಿಸಲಾಗಿದೆ ಎಂದು ತಿಳಿದು ಬಂದಿದೆ.

ಅವರನ್ನು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಯಲಹಂಕ ವಲಯದ ಜಂಟಿ ಆಯುಕ್ತರಾಗಿ ನಿಯೋಜಿಸಿ ವರ್ಗಾಯಿಸಲಾಗಿದೆ.

ಮೂಲತಃ ಬಾಗಲಕೋಟೆ ಜಿಲ್ಲೆಯವರಾದ ಮೊಮಿನ್ ಬೀದರ್ ಮತ್ತು ಹಾಸನ ಜಿಲ್ಲೆಗಳಲ್ಲಿ ಸಹಾಯಕ ಆಯುಕ್ತರಾಗಿ, ವಿಧಾನ ಸೌಧದಲ್ಲಿ ರಾಜ್ಯ ಸರಕಾರದ ಅಧೀನ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸಿದ್ದರು.

ಮೊಮಿನ್ ಅವರ ಈ ವರ್ಗಾವಣೆಗೆ ಕಾರಣ ತಿಳಿದು ಬಂದಿಲ್ಲ. ವಿವಿಯಲ್ಲಿ ಖಾಲಿಯಾಗಿರುವ ಕುಲಸಚಿವ ಹುದ್ದೆಯನ್ನು ಮುಂದಿನ ಆದೇಶದವರೆಗೆ ಪರಿಕ್ಷಾಂಗ ಕುಲಸಚಿವ ರಾಜು ಚೆನ್ನನ್ನವರ್ ಪ್ರಭಾರ ನೆಲೆಯಲ್ಲಿ ವಹಿಸಿಕೊಳ್ಳಲಿದ್ದಾರೆ ಎಂದು ತಿಳಿದು ಬಂದಿದೆ.

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News