ಮಂಗಳೂರು: ಬಸ್ ನಿಂದ ಬಿದ್ದು ಸಾವನ್ನಪ್ಪಿದ ಕಂಡಕ್ಟರ್ ಕುಟುಂಬಕ್ಕೆ ಪರಿಹಾರ ಧನ ವಿತರಣೆ

Update: 2023-09-03 09:42 GMT

ಮಂಗಳೂರು:  ಆಗಸ್ಟ್ 30 ಮಂಗಳವಾರದಂದು ನಂತೂರಿನಲ್ಲಿ ಬಸ್ ನಿಂದ ಆಯತಪ್ಪಿ ಬಿದ್ದು ಮರಣ ಹೊಂದಿದ ಬಸ್ ನಿರ್ವಾಹಕ ಗುರು ಯಾನೆ ಈರಯ್ಯ ಕುಟುಂಬಕ್ಕೆಕರಾವಳಿ ವಲಯ ಸಿಟಿ ಬಸ್ ಮಾಲಕರ ಒಕ್ಕೂಟದ ವತಿಯಿಂದ ಪರಿಹಾರ ಧನ ನೀಡಲಾಯಿತು.

ಒಂದು ಲಕ್ಷ ರೂಪಾಯಿಯ ಚೆಕ್ಕನ್ನು ದಕ್ಷಿಣ ಕನ್ನಡ ಬಸ್ ಮಾಲಕರ ಸಂಘದ ಅಧ್ಯಕ್ಷ ಅಝೀಝ್ ಪರ್ತಿಪ್ಪಾಡಿಯವರು ಮೃತನ ಸಹೋದರಿಗೆ ಹಸ್ತಾಂತರಿಸಿದರು.

ಈ ಸಂದರ್ಭದಲ್ಲಿ ಕರಾವಳಿ ಒಕ್ಕೂಟದ ಅಧ್ಯಕ್ಷರಾದ ಅಶೋಕ್ ತಾವ್ರೋ, ಪ್ರಧಾನ ಕಾರ್ಯದರ್ಶಿ ರಾಮಚಂದ್ರ ಪಿಲಾರ್, ಉಪಾಧ್ಯಕ್ಷರಾದ ರಾಮಚಂದ್ರ ನಾಯಕ್, ಯಶು ಚಂದ್ರಕಲಾ, ವಿನ್ನಿ ಡಿಸೋಜ ಹಾಗೂ ಇತರ ಸದಸ್ಯರು ಉಪಸ್ಥಿತರಿದ್ದರು

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News