ಮೆಲ್ಕಾರ್ | ಸುಗಮ ಸಂಚಾರಕ್ಕೆ ಅಡ್ಡಿ ಆರೋಪ: ಹೆದ್ದಾರಿ ಕಾಮಗಾರಿ ಗುತ್ತಿಗೆದಾರನ ವಿರುದ್ಧ ಪ್ರಕರಣ ದಾಖಲು

Update: 2023-08-29 08:04 GMT

ಬಂಟ್ವಾಳ, ಆ.29: ರಾಷ್ಟ್ರೀಯ ಹೆದ್ದಾರಿ ಮೆಲ್ಕಾರಿನಲ್ಲಿ ರಸ್ತೆಯ ಮಧ್ಯೆ ಲಾರಿಗಳನ್ನು ಹಾಗೂ ರೋಡ್ ರೋಲರ್ ವಾಹನಗಳನ್ನು ನಿಲ್ಲಿಸಿ ರಸ್ತೆ ಡಾಮರೀಕರಣ ಮಾಡುವ ನೆಪದಲ್ಲಿ ಹೆದ್ದಾರಿ ಸುಗಮ ಸಂಚಾರಕ್ಕೆ ಅಡ್ಡಿಪಡಿಸಿದ ಬಗ್ಗೆ ಗುತ್ತಿಗೆದಾರನ ವಿರುದ್ಧ ಬಂಟ್ವಾಳ ಸಂಚಾರಿ ಪೊಲೀಸ್ ಠಾಣೆಯಲ್ಲಿ ಸೋಮವಾರ ಪ್ರಕರಣ ದಾಖಲಾಗಿದೆ.

ಪಾಣೆಮಂಗಳೂರು ಗ್ರಾಮದ ಮೆಲ್ಕಾರ್ ಎಂಬಲ್ಲಿ ಲಾರಿಗಳನ್ನು ಮತ್ತು ರೋಡ್ ರೋಲರ್ ವಾಹನವನ್ನು ರಸ್ತೆಯ ಮಧ್ಯದಲ್ಲಿ ನಿಲ್ಲಿಸಿ, ರಸ್ತೆಯ ಡಾಂಬರಿಕರಣ ಮಾಡುವ ನೆಪದಲ್ಲಿ ಸಂಬಂಧಪಟ್ಟ ರಸ್ತೆಯ ಕಾಂಟ್ರಾಕ್ಟರ್ ಸಾರ್ವಜನಿಕರ ಸುಗಮ ಸಂಚಾರಕ್ಕೆ ಅಡ್ಡಿಪಡಿಸಿದ್ದಾರೆ. ಅಲ್ಲದೆ, ರಸ್ತೆಯ ಡಾಂಬರಿಕರಣದ ಸಮಯ ಯಾವುದೇ ಸೂಚನಾ ಫಲಕಗಳನ್ನು ಅಳವಡಿಸದೇ, ಈ ಬಗ್ಗೆ ಪೊಲೀಸರಿಗೆ ಕೂಡಾ ಯಾವುದೇ ಮಾಹಿತಿ ನೀಡದೇ ಸಾರ್ವಜನಿಕರ ಸುಗಮ ಸಂಚಾರಕ್ಕೆ ಅಡ್ಡಿಪಡಿಸಿ, ವಾಹನ ದಟ್ಟಣೆಗೆ ಕಾರಣವಾಗಿ ಸಂಚಾರ ನಿಯಮ ಉಲ್ಲಂಘನೆ ಮಾಡಿರುವುದಾಗಿ ಪೊಲೀಸ್ ದೂರಿನಲ್ಲಿ ಉಲ್ಲೇಖಿಸಲಾಗಿದೆ. ಈ ದೂರಿನ ಆಧಾರದಲ್ಲಿ ಸಂಬಂಧಪಟ್ಟ ರಸ್ತೆ ಕಾಂಟ್ರಾಕ್ಟರ್ ವಿರುದ್ದ ಬಂಟ್ವಾಳ ಸಂಚಾರಿ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 119/2023 ಕಲಂ 283 ಐಪಿಸಿಯಂತೆ ಪ್ರಕರಣ ದಾಖಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - Haneef

contributor

Byline - ವಾರ್ತಾಭಾರತಿ

contributor

Similar News