ಮೈಸೂರು ವಲಯ ಮಟ್ಟದ ಅಂತರ್ ಕಾಲೇಜು ಥ್ರೋಬಾಲ್ ಟೂರ್ನಿ: ಫಾದರ್ ಮುಲ್ಲರ್ ಹೋಮಿಯೋಪಥಿ ವೈದ್ಯಕೀಯ ಕಾಲೇಜು ಚಾಂಪಿಯನ್
ಮಂಗಳೂರು, ಅ.4: ದೇರಳಕಟ್ಟೆಯ ಫಾದರ್ ಮುಲ್ಲರ್ ಹೋಮಿಯೋಪಥಿ ವೈದ್ಯಕೀಯ ಮಹಾವಿದ್ಯಾಲಯದ ಕ್ರೀಡಾಂಗಣದಲ್ಲಿ ಬುಧವಾರ ರಾಜೀವ ಗಾಂಧಿ ಆರೋಗ್ಯ ವಿಜ್ಞಾನ ವಿಶ್ವವಿದ್ಯಾನಿಲಯ ಮೈಸೂರು ವಲಯ ಮಟ್ಟದ ಅಂತರ್‌ಕಾಲೇಜು ಥ್ರೋಬಾಲ್ ಟೂರ್ನಿಯ ಮಹಿಳಾ ವಿಭಾಗದಲ್ಲಿ ಫಾದರ್ ಮುಲ್ಲರ್ ಹೋಮಿಯೋಪಥಿ ವೈದ್ಯಕೀಯ ಕಾಲೇಜು ಚಾಂಪಿಯನ್ ಹಾಗೂ ಫಾದರ್ ಮುಲ್ಲರ್‌ಕಾಲೇಜ್ ಆಫ್ ಅಲೈಡ್ ಹೆಲ್ತ್ ಸೈನ್ಸಸ್ ರನ್ನರ್‌ಅಪ್ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿದೆ.
ಪುರುಷರ ವಿಭಾಗದಲ್ಲಿ ಚಾಮರಾಜನಗರ ಇನ್‌ಸ್ಟಿಟ್ಯೂಟ್‌ಆಫ್ ಮೆಡಿಕಲ್ ಸೈನ್ಸಸ್ ಮೈಸೂರು ಪ್ರಥಮ ಹಾಗೂ ಮಂಡ್ಯಇನ್‌ಸ್ಟಿಟ್ಯೂಟ್ ಆ್ ಮೆಡಿಕಲ್ ಸೈನ್ಸಸ್ ಮಂಡ್ಯ ರನ್ನರ್ ಅಪ್ ಪ್ರಶಸ್ತಿ ಗಳಿಸಿದೆ.
ಮಹಿಳೆಯರ ಟೆನ್ನಿಕಾಯ್ಟ್‌ನಲ್ಲಿ ಎಸ್‌ಡಿಎಮ್ ನ್ಯಾಚುರೋಪಥಿ ಆ್ಯಂಡ್ ಯೋಗಿಕ್ ಸೈನ್ಸಸ್ ಉಜಿರೆ ಪ್ರಥಮ ಮತ್ತು ಫಾದರ್ ಮುಲ್ಲರ್ ಕಾಲೇಜ್‌ಆಫ್ ನರ್ಸಿಂಗ್ ಕಂಕನಾಡಿ ಎಡನೇ ಸ್ಥಾನ ಪಡೆದಿದೆ.
ರಾಜೀವ್‌ಗಾಂಧಿ ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯಕ್ಕೆ ಒಳಪಟ್ಟ ವಿವಿಧ ವಿದ್ಯಾಸಂಸ್ಥೆಗಳಿಂದ ಥ್ರೋಬಾಲ್ ಮಹಿಳೆಯರ ವಿಭಾಗದಲ್ಲಿ 27 ತಂಡಗಳು, ಪುರುಷರ ವಿಭಾಗದಲ್ಲಿ13 ತಂಡಗಳು ಹಾಗೂ ಟೆನ್ನಿಕಾಯ್ಟ್ ಪಂದ್ಯದಲ್ಲಿ 10 ತಂಡಗಳು ಪಾಲ್ಗೊಂಡಿದ್ದವು.
ರಾಷ್ಟ್ರ ಮಟ್ಟದ ಥ್ರೋಬಾಲ್‌ಆಟಗಾರ್ತಿ ದೀಕ್ಷಿತಾ ಉದ್ಘಾಟಿಸಿದರು. ಫಾದರ್ ಮುಲ್ಲರ್ ಸೇವಾ ಸಂಸ್ಥೆಯ ನಿರ್ದೇಶಕ ವಂದನೀಯ ರಿಚರ್ಡ್ ಅಲೋಶಿಯಸ್ ಕುವೆಲ್ಲೊ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಕ್ರೀಡಾ ಸಮಿತಿಯ ಕಾರ್ಯದರ್ಶಿ ಆಲನ್ ಜಿನ್ಸನ್ ಅತಿಥಿಗಳನ್ನು ಸ್ವಾಗತಿದರು. ಕಾಲೇಜಿನ ಕ್ರೀಡಾ ಉಸ್ತುವಾರಿ ಡಾ.ದೀರಜ್ ಫೆರ್ನಾಂಡಿಸ್ ವಂದಿಸಿದರು.
ಫಾದರ್ ಮುಲ್ಲರ್ ಹೋಮಿಯೋಪಥಿ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಆಸ್ಪತ್ರೆಯ ಉಪ ಆಡಳಿತಾಧಿಕಾರಿ ವಂದನೀಯ ಅಶ್ವಿನ್ ಕ್ರಾಸ್ತ, ಫಾದರ್ ಮುಲ್ಲರ್ ಹೋಮಿಯೋಪಥಿ ವೈದ್ಯಕೀಯ ಕಾಲೇಜಿನ ಪ್ರಾಂಶುಪಾಲ ಡಾ.ಇ.ಎಸ್.ಜೆ.ಪ್ರಭು ಕಿರಣ್, ಉಪ ಪ್ರಾಂಶುಪಾಲ ಡಾ. ವಿಲ್ಮಾ ಮೀರಾ ಡಿ’ಸೋಜ, ಮೈಸೂರು ವಲಯದ ಕ್ರೀಡಾ ಸಂಚಾಲಕ ಡಾ. ಸುರೇಶ್‌ಎನ್,ಫಾದರ್ ಮುಲ್ಲರ್ ಹೋಮಿಯೋಪಥಿ ಕಾಲೇಜಿನ ದೈಹಿಕ ಶಿಕ್ಷಕ ಚೆನ್ನಕೇಶವ ಎಮ್. ಜಿ ಉಪಸ್ಥಿತರಿದ್ದರು.