ರಾಷ್ಟ್ರಮಟ್ಟದ ಫಿನ್ಸ್ ಈಜು ಚಾಂಪಿಯನ್‌ಶಿಪ್: ವಫಿ ಅಬ್ದುಲ್ ಹಕೀಂಗೆ 2 ಚಿನ್ನ, 2 ಬೆಳ್ಳಿಯ ಪದಕ

Update: 2024-08-23 15:41 GMT

ಮಂಗಳೂರು, ಆ.22: ರಾಜಸ್ಥಾನದಲ್ಲಿ ಅಂಡರ್‌ವಾಟರ್ ಸ್ಪೋರ್ಟ್ಸ್ ಅಸೋಸಿಯೇಶನ್ ಇಂಡಿಯಾ ಆಶ್ರಯದಲ್ಲಿ ರಾಜಸ್ಥಾನದಲ್ಲಿ ಇತ್ತೀಚೆಗೆ ನಡೆದ ಏಳನೇ ರಾಷ್ಟ್ರಮಟ್ಟದ ಫಿನ್ಸ್ ಈಜು ಚಾಂಪಿಯನ್‌ಶಿಪ್‌ನಲ್ಲಿ ಕರ್ನಾಟಕದ ವಫಿ ಅಬ್ದುಲ್ ಹಕೀಂ 2 ಚಿನ್ನ ಮತ್ತು 2 ಬೆಳ್ಳಿ ಪದಕಗಳನ್ನು ಜಯಿಸಿದ್ದಾರೆ.

ವಫಿ 400, 200, 100, ಮತ್ತು 50 ಮೀಟರ್ ಸ್ಪರ್ಧೆಗಳಲ್ಲಿ 2 ಚಿನ್ನ ಮತ್ತು 2 ಬೆಳ್ಳಿ ಪದಕಗಳನ್ನು ಗೆದ್ದಿದ್ದಾರೆ.

ಯೆನೆಪೋಯ ಶಾಲೆಯ ವಿದ್ಯಾರ್ಥಿಯಾಗಿರುವ ವಫಿ ಅಬ್ದುಲ್ ಹಕೀಂ ಅವರು 5ನೇ ವಯಸ್ಸಿನಲ್ಲಿ ಈಜು ಅಭ್ಯಾಸ ಆರಂಭಿಸಿದ್ದರು.

ಪ್ರಸ್ತುತ ಮಂಗಳ ಕ್ರೀಡಾಂಗಣದ ಈಜು ಕೊಳದಲ್ಲಿ ಜೈಹಿಂದ್ ಈಜು ಕ್ಲಬ್‌ನಲ್ಲಿ ಮುಖ್ಯ ತರಬೇತುದಾರ ರಾಮಕೃಷ್ಣ ಮತ್ತು ಸಹಾಯಕ ತರಬೇತುದಾರರಾದ ರಾಜೇಶ್ ಮತ್ತು ಯಶೋಧ ಮಾರ್ಗದರ್ಶನದಲ್ಲಿ ತರಬೇತಿ ಪಡೆಯುತ್ತಿದ್ದಾರೆ.

ವಫಿ ಕರ್ನಾಟಕವನ್ನು ವಿವಿಧ ಮಟ್ಟದಲ್ಲಿ ಪ್ರತಿನಿಧಿಸಿ, ಹಲವು ಪದಕಗಳನ್ನು ಗೆದ್ದಿದ್ದಾರೆ. ದಸರಾ ಕ್ರೀಡೆಗಳು, ಹಲವಾರು ಜಿಲ್ಲೆ, ರಾಜ್ಯ, ಸಿಬಿಎಸ್‌ಇ ಮತ್ತು ವಲಯ ಮಟ್ಟದ ಸ್ಪರ್ಧೆಗಳಲ್ಲಿ ಸಹ ಭಾಗವಹಿಸಿ ಅನೇಕ ಪ್ರಶಸ್ತಿಗಳನ್ನು ಜಯಿಸಿದ್ದಾರೆ.







 


 


 


Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News